ಇದು ನಡೆದಿದ್ದು ದೆಹಲಿಯ ಪಾಲಂ'ನಲ್ಲಿನ ಏರ್ ಫೋರ್ಸ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ. ಕಾರು ಬಂದ ಕಾರಣ 20 ನಿಮಿಷ ಆಟವನ್ನು ನಿಲ್ಲಿಸಲಾಗಿತ್ತು. ಭದ್ರತಾ ಸಿಬ್ಬಂದಿಯ ಅವಾಂತರದಿಂದ ಈ ಘಟನೆ ನಡೆದಿದ್ದು, ಕಾರು ಕ್ರೀಡಾಂಗಣದೊಳಗೆ ಚಾಲನೆ ಮಾಡಿಕೊಂಡು ಬಂದ ಮಹಾಶಯನ ಹೆಸರು ಗಿರೀಶ್ ಶರ್ಮಾ ಎಂದು.
ನವದೆಹಲಿ(ನ.03): ದೆಹಲಿ ಹಾಗೂ ಉತ್ತರ ಪ್ರದೇಶ ನಡುವೆ ರಣಜಿ ಪಂದ್ಯ ನಡೆಯುತ್ತಿತ್ತು. ಉತ್ತರ ಪ್ರದೇಶ ತಂಡದ ಆಟಗಾರರು 2ನೇ ಇನ್ನಿಂಗ್ಸ್ ಆಟವಾಡುತ್ತಿದ್ದರು. ಆಗ ಸಮಯ 4.40 ಆಗಿತ್ತು ಇದ್ದಕ್ಕಿದ್ದಂತೆ ಬಂದ ವ್ಯಾಗನಾರ್ ಕಾರು ಬ್ಯಾಟ್ ಮಾಡುತ್ತಿದ್ದ ಪಿಚ್ ಮಧ್ಯ ಬಂದಿತು. ಕಾರ್ ನೋಡಿ ಆಟವಾಡುತ್ತಿದ್ದವರೆಲ್ಲ ಒಂದು ಕ್ಷಣ ಶಾಕ್ ಆದರು. ಏನಾಗುತ್ತದೆ ಎಂಬ ಭಯ ಎಲ್ಲರಲ್ಲೂ ಕಾಡತೊಡಗಿತು.
ಕ್ರೀಡಾಂಗಣದಲ್ಲಿ 2 ತಂಡಗಳನ್ನು ಪ್ರತಿನಿಧಿಸಿದ್ದ ಭಾರತ ತಂಡದ ಸ್ಟಾರ್ ಆಟಗಾರರಾದ ಗೌತಮ್ ಗಂಭೀರ್, ಇಶಾಂತ್ ಶರ್ಮಾ, ರಿಶಬ್ ಪಂತ್ ಹಾಗೂ ಸುರೇಶ್ ರೈನಾ ಹಾಗೂ ಕೂಡ ಕೆಲಹೊತ್ತು ಭಯಗೊಂಡಿದ್ದರು. ಇದು ನಡೆದಿದ್ದು ದೆಹಲಿಯ ಪಾಲಂ'ನಲ್ಲಿನ ಏರ್ ಫೋರ್ಸ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ. ಕಾರು ಬಂದ ಕಾರಣ 20 ನಿಮಿಷ ಆಟವನ್ನು ನಿಲ್ಲಿಸಲಾಗಿತ್ತು. ಭದ್ರತಾ ಸಿಬ್ಬಂದಿಯ ಅವಾಂತರದಿಂದ ಈ ಘಟನೆ ನಡೆದಿದ್ದು, ಕಾರು ಕ್ರೀಡಾಂಗಣದೊಳಗೆ ಚಾಲನೆ ಮಾಡಿಕೊಂಡು ಬಂದ ಮಹಾಶಯನ ಹೆಸರು ಗಿರೀಶ್ ಶರ್ಮಾ ಎಂದು.
ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕ್ರೀಡಾಂಗಣದ ಅಧಿಕಾರಿಗಳು ಕೂಡ ಭದ್ರತೆಯ ಲೋಪ ಕುರಿತು ತನಿಖೆ ನಡೆಸುತ್ತಿದ್ದಾರೆ. ಬುಧವಾರ ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಕ್ರಿಕೆಟ್ ಪಂದ್ಯವಿದ್ದ ಕಾರಣ ಪಾಲಂ ಕ್ರೀಡಾಂಗಣಕ್ಕೆ ರಣಜಿ ಪಂದ್ಯವನ್ನು ಸ್ಥಳಾಂತರಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ದೆಹಲಿ ಮೊದಲ ಇನ್ನಿಂಗ್ಸ್'ನಲ್ಲಿ 269 ಗಳಿಸಿದರೆ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್'ನಲ್ಲಿ 291 ಹಾಗೂ 2ನೇ ಇನ್ನಿಂಗ್ಸ್'ನಲ್ಲಿ 3ನೇ ದಿನವಾದ ಇಂದು 7 ವಿಕೇಟ್ ನಷ್ಟಕ್ಕೆ 224 ರನ್'ಗಳನ್ನು ಗಳಿಸಿದೆ. ನಾಳೆ ಕೊನೆಯ ಒಂದು ದಿನದ ಆಟ ಬಾಕಿಯುಳಿದಿದೆ. ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
