Asianet Suvarna News Asianet Suvarna News

ಟೀಂ ಇಂಡಿಯಾ ಮಹಿಳಾ ತಂಡಕ್ಕೆ ನೂತನ ಕೋಚ್ ಆಯ್ಕೆ

ಟೀಂ ಇಂಡಿಯಾ ಮಹಿಳಾ  ತಂಡಕ್ಕೆ ಕೋಚ್ ಆಯ್ಕೆ ಮುಕ್ತಾಯವಾಗಿದೆ. ಅಳೆದು ತೂಗಿ ಬಿಸಿಸಿಐ ಮಹಿಳಾ ತಂಡಕ್ಕೆ ಮಾರ್ಗದರ್ಶನಕನನ್ನ ಆಯ್ಕೆ ಮಾಡಿದೆ. ಹಾಗಾದರೆ ನೂತನ ಜವಾಬ್ದಾರಿ ನಿರ್ವಹಿಸಲಿರುವ ಕೋಚ್ ಯಾರು? ಇಲ್ಲಿದೆ. 

Ramesh Powar named Indian women teams head coach
Author
Bengaluru, First Published Aug 14, 2018, 4:14 PM IST

ಮುಂಬೈ(ಆ.14): ಟೀಂ ಇಂಡಿಯಾ ಮಹಿಳಾ ತಂಡಕ್ಕ ನೂನತ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಆಯ್ಕೆಯಾಗಿದ್ದಾರೆ. ಮುಂಬರುವ ಟಿ20 ಮಹಿಳಾ ವಿಶ್ವಕಪ್ ವರೆಗೆ ರಮೇಶ್ ಪೊವಾರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ತುಷಾರ್ ಅರೋಥ್ ದಿಢೀರ್ ರಾಜಿನಾಮೆ ಬಳಿಕ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ದ ರಮೇಶ್ ಪೊವಾರ್ ಇದೀಗ ಪೂರ್ಣ ಅವಧಿಗೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕೋಚ್ ರೇಸ್‌ನಲ್ಲಿದ್ದ ಇತರ ಐವರು ದಿಗ್ಗಜರನ್ನ ಹಿಂದಿಕ್ಕಿ ಕೋಚ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಪೊವಾರ್ ಯಶಸ್ವಿಯಾಗಿದ್ದಾರೆ. 

ಮುಬರುವ ಶ್ರೀಲಂಕಾ ಪ್ರವಾಸ, ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ನವೆಂಬರ್‌ನಲ್ಲಿ ನಡೆಯಲಿರು ಟಿ20 ಮಹಿಳಾ ವಿಶ್ವಕಪ್ ‌ವರೆಗೆ ರಮೇಶ್ ಪೊವಾರ್ ಟೀಂ ಇಂಡಿಯಾ ಮಹಿಳಾ ತಂಡ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
 
ಕೋಚ್ ರೇಸ್‌ನಲ್ಲಿಅಂತಿಮ 6 ಸದಸ್ಯರು ಕಾಣಿಸಿಕೊಂಡಿದ್ದರು.  6 ಸದಸ್ಯರ ಪಟ್ಟಿಯಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು.   ಸದ್ಯ ಬಾಂಗ್ಲಾದೇಶ ತಂಡದ ಸ್ಪಿನ್ ಕೋಚ್ ಆಗಿರುವ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ, ಭಾರತ ತಂಡದ ಮಾಜಿ ನಾಯಕಿ, ರಾಜ್ಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಮಮತಾ ಮಾಬೆನ್ ಹಾಗೂ ಕರ್ನಾಟಕ ಸೇರಿ ಹಲವು ರಣಜಿ ತಂಡಗಳ ಕೋಚ್ ಆಗಿ ಯಶಸ್ಸು ಸಾಧಿಸಿರುವ, ಹಾಲಿ ಭಾರತ ಅಂಡರ್-19 ತಂಡದ ಬೌಲಿಂಗ್ ಕೋಚ್ ಸನತ್ ಕುಮಾರ್ ಕೋಚ್ ಹುದ್ದೆಗೆ ಪೈಪೋಟಿ ನಡೆಸಿದ್ದರು. ಆದರೆ ಪೊವಾರ್ ಹೆಸರನ್ನ ಬಿಸಿಸಿಐ ಅಂತಿಮಗೊಳಿಸಿದೆ.

ಭಾರತದ ಪರ 2 ಟೆಸ್ಟ್ ಪಂದ್ಯದಿಂದ 6 ವಿಕೆಟ್ ಕಬಳಿಸಿರುವ ರಮೇಶ್ ಪವಾರ್, 31 ಏಕದಿನದಲ್ಲಿ 34 ವಿಕೆಟ್ ಉರುಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳಾ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಪ್ರತಿನಿಧಿಸಿದ್ದಾರೆ.

Follow Us:
Download App:
  • android
  • ios