Asianet Suvarna News Asianet Suvarna News

ಮಳೆಯಾಟದಲ್ಲಿ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್

ಮಳೆಯ ಕಾರಣದಿಂದಾಗಿ ಡೆಲ್ಲಿಗೆ ಗೆಲ್ಲಲು ಡೆಕ್ವರ್ಥ್ ಲೂಯಿಸ್ ನಿಯಮದಂತೆ 6 ಓವರ್'ಗಳಿಗೆ 71 ರನ್'ಗಳ ಗುರಿ ನಿಗದಿ ಮಾಡಲಾಗಿತ್ತು. ಆದರೆ ಡೆಲ್ಲಿ ಕೇವಲ 60 ರನ್'ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಡೆಲ್ಲಿ ಪರ ರಿಶಭ್ ಪಂಥ್ 20 ಮ್ಯಾಕ್ಸ್'ವೆಲ್ 17 ಹಾಗೂ ಕ್ರಿಸ್ ಮೋರಿಸ್ 17* ರನ್ ಬಾರಿಸಿದರು.

Rajasthan Royals won by 10 runs

ಜೈಪುರ(ಏ.11): ಐದು ವರ್ಷಗಳ ಬಳಿಕ ಮೊದಲ ಐಪಿಎಲ್ ಪಂದ್ಯ ಆಸ್ವಾದಿಸಲು ನೆರೆದಿದ್ದ ರಾಜಸ್ಥಾನ ಅಭಿಮಾನಿಗಳಿಗೆ ಕೊನೆಗೂ ರಹಾನೆ ನಿರಾಸೆ ಮಾಡಲಿಲ್ಲ. ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ಮಳೆಯಾಟದ ನಡುವೆಯೂ ಚುರುಕಿನ ಬೌಲಿಂಗ್ ದಾಳಿ ನಡೆಸಿದ ರಾಜಸ್ಥಾನ ಕೊನೆಗೂ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 10 ರನ್'ಗಳ ರೋಚಕ ಜಯ ಸಾಧಿಸಿತು.

ಮಳೆಯ ಕಾರಣದಿಂದಾಗಿ ಡೆಲ್ಲಿಗೆ ಗೆಲ್ಲಲು ಡೆಕ್ವರ್ಥ್ ಲೂಯಿಸ್ ನಿಯಮದಂತೆ 6 ಓವರ್'ಗಳಿಗೆ 71 ರನ್'ಗಳ ಗುರಿ ನಿಗದಿ ಮಾಡಲಾಗಿತ್ತು. ಆದರೆ ಡೆಲ್ಲಿ ಕೇವಲ 60 ರನ್'ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಡೆಲ್ಲಿ ಪರ ರಿಶಭ್ ಪಂಥ್ 20 ಮ್ಯಾಕ್ಸ್'ವೆಲ್ 17 ಹಾಗೂ ಕ್ರಿಸ್ ಮೋರಿಸ್ 17* ರನ್ ಬಾರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತ್ತು. ಗಂಭೀರ್ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್'ಗಳು ತವರಿನ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. 28 ರನ್'ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜಸ್ಥಾನಕ್ಕೆ ನಾಯಕ ರಹಾನೆ(45) ಹಾಗೂ ಸಂಜು ಸ್ಯಾಮ್ಸನ್(29) ಆಸರೆಯಾದರು. ರಾಜಸ್ಥಾನ ಇನಿಂಗ್ಸ್ ಮುಕ್ತಾಯವಾಗಲು 2.1 ಓವರ್ ಬಾಕಿಯಿರುವಾಗ ಎಡಬಿಡದೇ ಸುರಿದ ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾಜಸ್ಥಾನ 17.1 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತ್ತು.

Follow Us:
Download App:
  • android
  • ios