ಈಡನ್ ಗಾರ್ಡನ್ ಮೈದಾನದ ಪಿಚ್ ಒದ್ದೆಯಾಗದಂತೆ ಕ್ರೀಡಾಂಗಣ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ.

ಕೋಲ್ಕತಾ(ಸೆ.19): ಸತತವಾಗಿ ಮಳೆ ಸುರಿಯುತ್ತಿದ್ದ ಕಾರಣ, ಇಂದು ಭಾರತ ಕ್ರಿಕೆಟ್ ತಂಡ ತನ್ನ ಅಭ್ಯಾಸ ಅವಧಿಯನ್ನು ರದ್ದುಗೊಳಿಸಬೇಕಾಯಿತು.

ಬುಧವಾರವೂ ಮಳೆ ಮುಂದುವರಿಯಲಿದ್ದು, ಗುರುವಾರದ ಪಂದ್ಯಕ್ಕೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಡನ್ ಗಾರ್ಡನ್ ಮೈದಾನದ ಪಿಚ್ ಒದ್ದೆಯಾಗದಂತೆ ಕ್ರೀಡಾಂಗಣ ಸಿಬ್ಬಂದಿ ಎಚ್ಚರ ವಹಿಸಿದ್ದಾರೆ.

ಇಂದು ಬೆಳಗ್ಗೆ ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸಿದ ಆಸ್ಟ್ರೇಲಿಯಾ ಆಟಗಾರರಿಗೆ ಮಳೆ ಸ್ವಾಗತ ಕೋರಿತು. ಬ್ಯಾಟ್ಸ್‌'ಮನ್‌'ಗಳ ಒಳಾಂಗಣ ವ್ಯವಸ್ಥೆ ಬಳಸಿಕೊಂಡು ಅಭ್ಯಾಸ ನಡೆಸಿದರೆ, ವೇಗದ ಬೌಲರ್‌'ಗಳು ಹೋಟೆಲ್‌'ಗೆ ಹಿಂದಿರುಗಿದರು.