ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಉಭಯ ತಂಡಗಳಿಗಿಂತ ಹೆಚ್ಚಾಗಿ ಮಳೆಯ ಆರ್ಭಟವೇ ಹೆಚ್ಚಾಗಿದೆ. ಇದೀಗ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಯಾಗೋ ಸಾಧ್ಯತೆ ಇದೆ.
ಸಿಡ್ನಿ(ನ.27): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿತ್ತು. ಹೀಗಾಗಿ ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೆ, ದ್ವಿತೀಯ ಪಂದ್ಯ ರದ್ದಾಗಿತ್ತು. ಇದೀಗ ಸಿಡ್ನಿಯಲ್ಲಿ ಆಯೋಜಿಸಲಾಗಿರುವ ಏಕೈಕ ಅಭ್ಯಾಸ ಪಂದ್ಯ ಕೂಡ ಮಳೆಗೆ ಆಹುತಿಯಾಗೋ ಸಾಧ್ಯತೆ ಹೆಚ್ಚಿದೆ.
ಸಿಡ್ನಿ ಮೈದಾನದಲ್ಲಿ ಸದ್ಯ ಮಳೆ ಸುರಿಯುತ್ತಿದೆ. ಹೀಗಾಗಿ ನಾಳೆ(ನ.28)ಯಿಂದ ಆರಂಭವಾಗಬೇಕಿದ್ದ ಅಭ್ಯಾಸ ಪಂದ್ಯ ಒಂದು ದಿನ ತಡವಾಗಿ ಆರಂಭವಾಗೋ ಸಾಧ್ಯತೆ ಇದೆ. ಹೀಗಾದಲ್ಲಿ 3 ದಿನದ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ 3 ದಿನದ ಅಭ್ಯಾಸ ಪಂದ್ಯ ನಿಗದಿ ಮಾಡಿತ್ತು. ಆದರೆ ಬಿಸಿಸಿಐ ಮನವಿ ಮೇರೆಗೆ ಪಂದ್ಯವನ್ನ 4 ದಿನಕ್ಕೆ ವಿಸ್ತರಿಸಲಾಗಿತ್ತು. ಆದರೆ ಮಳೆಯಿಂದಾಗಿ ಮತ್ತೆ 3 ದಿನಕ್ಕೆ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
