ಗಯಾನ(ಆ.06): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಯಾಗಿದೆ. ಹೀಗಾಗಿ ಟಾಸ್ ಪಕ್ರಿಯೆ ವಿಳಂಬವಾಗಲಿದೆ. ಅಮೆರಿಕಾದಿಂದ ಪಂದ್ಯ ಇದೀಗ ವೆಸ್ಟ್ ಇಂಡೀಸ್‌ಗೆ ಶಿಫ್ಟ್ ಆಗಿದೆ. ಗಯಾನದಲ್ಲಿ ಆಯೋಜಿಸಲಾಗಿರುವ 3ನೇ ಟಿ20 ಪಂದ್ಯ ಇದೀಗ ತವರಿನ ಅಭಿಮಾನಿಗಳಿಗೆ ತೀವ್ರ ನಿರಾಸೆ ತರುವ ಸಾಧ್ಯತೆ ಇದೆ.

ಫ್ಲೋರಿಡಾದಲ್ಲಿ ನಡೆದ 2ನೇ ಟಿ20 ಪಂದ್ಯದ ಅಂತ್ಯದಲ್ಲಿ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಭಾರತಕ್ಕೆ ಡಕ್ವರ್ತ್ ನಿಯಮದ ಪ್ರಕಾರ 22 ರನ್ ಗೆಲುವು ನೀಡಲಾಗಿತ್ತು. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಸುರಿಯುತ್ತಿರುವುದರಿಂದ ಭಾರತದ ಕ್ಲೀನ್ ಸ್ವೀಪ್ ಕನಸಿಗೆ ಅಡೆತಡೆಯಾಗಿದೆ.