ಕಿರಿಯರ ತಂಡದ ಕೋಚ್ ಆಗಿ ಮುಂದುವರಿಯುವ ನಿಟ್ಟಿನಲ್ಲಿ ದ್ರಾವಿಡ್ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಮೆಂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನವದೆಹಲಿ(ಜು.02): ಭಾರತ 'ಎ'ಮತ್ತು 19 ವರ್ಷದೊಳಗಿನ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಸಂಭಾವನೆಯನ್ನಿ ಬಿಸಿಸಿಐ ಶೇ.100ರಷ್ಟು ಸಂಭಾವನೆ ಹೆಚ್ಚಿಸಿದೆ.
2.5 ಕೋಟಿ ಕೋಟಿ ರೂ. ಪಡೆಯುತ್ತಿದ್ದ ದ್ರಾವಿಡ್ ಇನ್ನು ಮುಂದೆ 5 ಕೋಟಿ ಪಡೆಯಲಿದ್ದಾರೆ. 2 ದಿನಗಳ ಹಿಂದಷ್ಟೆ ಭಾರತ ಕಿರಿಯರ ಕೋಚ್ ಅವಧಿಯನ್ನು 2 ವರ್ಷ ವಿಸ್ತರಿಸಿತ್ತು. ಇದೀಗ ಅದರ ಬೆನ್ನಲ್ಲೇ ವೇತನವನ್ನು ದುಪ್ಪಟ್ಟುಗೊಳಿಸಿದೆ. ಕಿರಿಯರ ತಂಡದ ಕೋಚ್ ಆಗಿ ಮುಂದುವರಿಯುವ ನಿಟ್ಟಿನಲ್ಲಿ ದ್ರಾವಿಡ್ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಮೆಂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
