ಮುಂದಿನ ವರ್ಷ 19 ವರ್ಷದೊಳಗಿನ ವಿಶ್ವಕಪ್ ನಡೆಯಲಿದೆ. ಅವರನ್ನು ಪೂರ್ಣವಧಿಯಾಗಿ ಭಾರತ ಎ ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿ ನೇಮಿಸಲಾಗಿದೆ

ನವದೆಹಲಿ(ಜು.22): ತನ್ನಿಷ್ಟದಂತೆ ಕೋಚ್'ಗಳನ್ನು ಕೊಹ್ಲಿಗೆ ಮತ್ತೊಂದು ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ವಿದೇಶದ ಪ್ರವಾಸಗಳಿಗೆ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕವಾದ ರಾಹುಲ್ ದ್ರಾವಿಡ್ ಅವರು ಜು.26 ರಂದು ಆರಂಭವಾಗುವ ಭಾರತ ಪ್ರವಾಸಕ್ಕೆ ತೆರಳುತ್ತಿಲ್ಲ. ಪ್ರಸ್ತುತ ಭಾರತ ಎ ಹಾಗೂ ಅಂಡರ್ 19 ತಂಡಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುವುದರಿಂದ ಟೀಂ ಇಂಡಿಯಾದೊಂದಿಗೆ ಹೋಗುತ್ತಿಲ್ಲ ಎಂದು ಬಿಸಿಸಿಐ ಆಡಳಿತಾಧಿಕಾರಿ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

ಮುಂದಿನ ವರ್ಷ 19 ವರ್ಷದೊಳಗಿನ ವಿಶ್ವಕಪ್ ನಡೆಯಲಿದೆ. ಅವರನ್ನು ಪೂರ್ಣವಧಿಯಾಗಿ ಭಾರತ ಎ ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿ ನೇಮಿಸಲಾಗಿದೆ. ಈ ಸಂದರ್ಭದಲ್ಲಿ ಜಾಹೀರ್ ಖಾನ್ ಬಗ್ಗೆಯೂ ಪ್ರಸ್ತಾಪಿಸಿದ ಅವರು 'ಜಾಹೀರ್ ಐಪಿಎಲ್ ತಂಡ ಡೆಲ್ಲಿ ಡೇರ್'ಡೇವಿಲ್ಸ್'ನ ನಾಯಕರಾಗಿರುವ ಕಾರಣ ಟೀಂ ಇಂಡಿಯಾಕ್ಕೆ ಪೂರ್ಣಾವಧಿ ಬೌಲಿಂಗ್ ಸಲಹೆಗಾರರಾಗಿ ನೇಮಕ ಮಾಡಲು ಸಾಧ್ಯವಾಗಲಿಲ್ಲ' ಈ ಬಗ್ಗೆ ಅವರು ಸಹ ತಿಳಿಸಿದ್ದರು ಎಂದು ವಿನೋದ್ ರಾಯ್ ಹೇಳಿದ್ದಾರೆ .