ರಾಹುಲ್ ಅವರು 2015ರಲ್ಲಿ ಭಾರತ ಎ ತಂಡದ ಕೋಚ್ ಆಗಿ ಸಾರಥ್ಯ ವಹಿಸಿಕೊಂಡಿದ್ದರು. ಅವರು ತಂಡ ಮುನ್ನಡೆಸಿದ ಪರಿಣಾಮ ಕಿರಿಯ ಆಟಗಾರರು ದೇಸಿ ಹಾಗೂ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕೋಚ್ ಆದ ನಂತರ ಭಾರತ ಎ ತಂಡ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಡುವೆ ನಡೆದ ತ್ರಿಕೋನ ಸರಣಿಯನ್ನು ಜಯಿಸಿತ್ತು. ಅಲ್ಲದೆ 2016ರಲ್ಲಿ ವಿಶ್ವಕಪ್'ನಲ್ಲಿ ರನ್ನರ್ ಅಫ್ ಸ್ಥಾನ ಪಡೆದಿತ್ತು.
ಚೆನ್ನೈ(ಜೂ.30): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭಾರತ ಎ ಹಾಗೂ ಅಂಡರ್ 19 ತಂಡಗಳ ಕೋಚ್ ಆಗಿ ಮುಂದಿನ 2 ವರ್ಷಗಳ ಕಾಲ ಮುಂದುವರಿಸಿದೆ. ಅಲ್ಲದೆ ದ್ರಾವಿಡ್ ಅವರು ಐಪಿಎಲ್'ನ ಡೆಲ್ಲಿ ಡೇರ್'ಡೇವಿಲ್ ತಂಡದ ಮೆಂಟರ್ ಸ್ಥಾನದಿಂದ ನಿರ್ಗಮಿಸಿದ್ದಾರೆ.
ರಾಹುಲ್ ಅವರು 2015ರಲ್ಲಿ ಭಾರತ ಎ ತಂಡದ ಕೋಚ್ ಆಗಿ ಸಾರಥ್ಯ ವಹಿಸಿಕೊಂಡಿದ್ದರು. ಅವರು ತಂಡ ಮುನ್ನಡೆಸಿದ ಪರಿಣಾಮ ಕಿರಿಯ ಆಟಗಾರರು ದೇಸಿ ಹಾಗೂ ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಕೋಚ್ ಆದ ನಂತರ ಭಾರತ ಎ ತಂಡ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಡುವೆ ನಡೆದ ತ್ರಿಕೋನ ಸರಣಿಯನ್ನು ಜಯಿಸಿತ್ತು. ಅಲ್ಲದೆ 2016ರಲ್ಲಿ ವಿಶ್ವಕಪ್'ನಲ್ಲಿ ರನ್ನರ್ ಅಫ್ ಸ್ಥಾನ ಪಡೆದಿತ್ತು.
ಬಿಸಿಸಿಐ ಉಸ್ತುವಾರಿ ಅಧ್ಯಕ್ಷ ಸಿಕೆ ಖನ್ನಾ ಹಾಗೂ ಉಸ್ತುವಾರಿ ಕಾರ್ಯದರ್ಶಿ ಅಮಿತಾಭ್ ಚೌಧರಿ' ದ್ರಾವಿಡ್ ಅವರ ನೇತೃತ್ವದಲ್ಲಿಭಾರತ ಕಿರಿಯರ ತಂಡ ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಯಶಸ್ಸು ಸಾಧಿಸಲಿದೆ ಎಂದು ತಿಳಿಸಿದ್ದಾರೆ.