ಸದ್ಯ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಭಾರತದ ಯುವ ಜನತೆಯ ಪಾಲಿಗೆ ಹಾಟ್​​​ ಸೆನ್ಸೇಷನ್​​. ಈ ಯೂತ್​​ ಐಕಾನ್​ ಏನೇ ಮಾಡಿದ್ರೂ ನಮ್ಮ ಹುಡುಗರು ಫಾಲೋ ಮಾಡ್ತಾರೆ. ಪರಿಸ್ಥಿತಿ ಹೀಗಿರುವಾಗ ಟೀಂ ಇಂಡಿಯಾದ ಮಾಜಿ ನಾಯಕನೊಬ್ಬ ಕೊಹ್ಲಿಯನ್ನ ಫಾಲೋ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಿದ ಆ ಮಾಜಿ ನಾಯಕ ಯಾರು..? ಯಾಕೀಗೆ ಹೇಳಿದ್ರು..? ಇಲ್ಲಿದೆ ವಿವರ

ವಿರಾಟ್​​ ಕೊಹ್ಲಿ, ಈತನ ಸ್ಟೈಲ್​ ಆಫ್​​ ಬ್ಯಾಟಿಂಗ್​​, ಮೈದಾನದಲ್ಲಿ ತೊರೋ ಅಗ್ರಸ್ಸೀವ್​ನೆಸ್​​​, ಕ್ಯಾಪ್ಟನ್ಸಿ ಸ್ಟೈಲ್​ಗೆ ಫಿದಾ ಆಗದವರೇ ಇಲ್ಲ. ಎಷ್ಟೋ ಮಕ್ಕಳು ಕೊಹ್ಲಿಯನ್ನ ನೋಡಿಯೇ ಕ್ರಿಕೆಟ್​​ ಅನ್ನೋ ಮಾಯಲೋಕಕ್ಕೆ ಎಂಟ್ರಿ ಕೊಡ್ತಾರೆ. ನಾನೂ ಕೊಹ್ಲಿಯಂತೆ ಆಗಬೇಕು ಅಂತ ಆತನನ್ನ ಇನ್ನಿಲ್ಲದಂತೆ ಫಾಮೋ ಮಾಡ್ತಾರೆ. ಅಷ್ಟರ ಮಟ್ಟಿಗೆ ಟೀಂ ಇಂಡಿಯಾ ನಾಯಕ ಭಾರತದ ಯುವ ಪೀಳಿಗೆಯನ್ನ ಆವರಿಸಿಕೊಂಡುಬಿಟ್ಟಿದ್ದಾರೆ.

ಕೊಹ್ಲಿ ಇಷ್ಟೆಲ್ಲಾ ಹವಾ ಕ್ರಿಯೇಟ್​​ ಮಾಡಿರುವಾಗ್ಲೇ ಟೀಂ ಇಂಡಿಯಾದ ಮಾಜಿ ನಾಯಕರೊಬ್ಬರು ಕೊಹ್ಲಿ ವಿರುದ್ಧದ ಮಾತನ್ನಾಡಿದ್ದಾರೆ. ಭಾರತದ ಯುವ ಪೀಳಿಗೆಗೆ, ಯುವ ಕ್ರಿಕೆಟರ್'​​ಗಳಿಗೆ ವಿರಾಟ್​​​ ಕೊಹ್ಲಿಯನ್ನ ಫಾಲೋ ಮಾಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ. ಅಷ್ಟಕ್ಕೂ ಕೊಹ್ಲಿ ವಿರುದ್ಧ ಈ ರೀತಿ ಮಾತನ್ನಾಡಿರೋದು ಯಾರು ಗೊತ್ತಾ ರಾಹುಲ್​ ದ್ರಾವಿಡ್​​​.

ಕೊಹ್ಲಿ ಮೇಲೆ ರಾಹುಲ್​ ದ್ರಾವಿಡ್​​​ ಮುನಿಸಿಕೊಂಡಿರೋದ್ಯಾಕೆ..?

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನ್ನಾಡಿದ ಮಾಜಿ ನಾಯಕ ರಾಹುಲ್​ ದ್ರಾವಿಡ್​​​ರ ಸದ್ಯದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಯುವ ಆಟಗಾರರು ಸದ್ಯ ಕೊಹ್ಲಿಯನ್ನ ಹುಚ್ಚರಂತೆ ಫಾಲೋ ಮಾಡ್ತಿದ್ದಾರೆ. ಆದು ತಪ್ಪು. ಕೊಹ್ಲಿಯನ್ನ ನೀವು ಅನುಸರಿಸಿದ್ರೆ ನಿಮ್ಮತನವನ್ನ ಮತ್ತು ನಿಮ್ಮ ಸ್ಟೈಲ್​​​ ಆಫ್​ ಬ್ಯಾಟಿಂಗ್​ ಅನ್ನ ಕಳೆದುಕೊಳ್ಳಲಿದ್ದೀರಿ ಅಂತ ಹೆಚ್ಚರಿಕೆ ನೀಡಿದ್ರು.

ಕೊಹ್ಲಿ ಬಗ್ಗೆ ಮಾತನ್ನಾಡಿದ ರಾಹುಲ್​ ದ್ರಾವಿಡ್​​​, ವಿರಾಟ್​​ ಕೊಹ್ಲಿ ಕೆಲವೊಮ್ಮೆ ಮೈದಾನದಲ್ಲಿ ಅತೀರೇಕವಾಗಿ ವರ್ತಿಸುತ್ತಾರೆ. ಇದು ನನಗೆ ಮುಜುಗರ ತರಿಸುತ್ತೆ. ಪ್ರತೀ ಸರಣಿ ಆರಂಭಕ್ಕೂ ಮುನ್ನ ಅವರು ನೀಡುವ ಹೇಳಿಕೆಗಳು ಅತೀರೇಕವಾಗಿರುತ್ತೆ. ಕೋಟ್ಯಾಂತರ ಯುವ ಕ್ರಿಕೆಟಿಗರು ಅವರನ್ನ ಫಾಲೋ ಮಾಡ್ತಾರೆ, ಅವರ ಬ್ಯಾಟಿಂಗ್​ ಸ್ಟೈಲ್​ನ ಅನುಕರಣೆ ಮಾಡ್ತಾರೆ. ಹೀಗೆ ಮಾಡಿದ್ರೆ ತಮ್ಮ ಸ್ಟೈಲ್​ ಅನ್ನ ಕಳೆದುಕೊಳ್ತಾರೆ. ಅವರಲ್ಲಿ ತಮ್ಮ ತಮ ಇರೋದಿಲ್ಲ ಎಂದು ಹೇಳಿಕೆ ನೀಡಿದ್ರು.

ಸದ್ಯ ದ್ರಾವಿಡ್​​ರ ಈ ಹೇಳಿಕೆ ಕ್ರಿಕೆಟ್​​ ಲೋಕವನ್ನ ದಂಗು ಬಡಿಸಿದ್ರೂ ಅವರ ಮಾತಿನಲ್ಲಿ ಸತ್ಯವಿದೆ. ದ್ರಾವಿಡ್​​ ಹೇಳುವಂತೆ ಕೊಹ್ಲಿ ಕೆಲವೊಮ್ಮೆ ಮೈದಾನದಲ್ಲಿ ಅತಿರೇಖವಾಗಿ ವರ್ತಿಸುತ್ತಾರೆ. ಅವರ ಹೇಳಿಕೆಗಳು ಪ್ರಚೋದಿಸುವಂತಿರುತ್ತದೆ ಅದು ಯುವ ಆಟಗಾರರ ಭವಿಷ್ಯಕ್ಕೆ ತೊಡಕ್ಕಾಗಬಹುದು ಹೀಗಾಗಿ ದ್ರಾವಿಡ್​​ ಈ ರೀತಿ ಹೇಳಿರೋದು. ಆದ್ರೆ ಕೊಹ್ಲಿ ಬದಲಾಗೊದಂತೂ ಸುಳ್ಳು ಹೀಗಾಗಿ ಯುವ ಆಟಗಾರರೇ ಕೊಹ್ಲಿಯನ್ನ ಫಾಲೋ ಮಾಡೊದನ್ನ ಕಡಿಮೆ ಮಾಡಿಕೊಳ್ಳಬೇಕಾಗುತ್ತೆ. ಏನಂತೀರಿ