ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಂಡರ್‌ 14 ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್’ನ್ಯಾಷನಲ್ ಸ್ಕೂಲ್’ನ ಸಮಿತ್‌, ಬೆತನೆ ಹೈಸ್ಕೂಲ್‌ ವಿರುದ್ಧ 81 ರನ್‌ ಬಾರಿಸಿದರು. ಜತೆಗೆ ಬೌಲಿಂಗ್’ನಲ್ಲಿ 12 ರನ್‌ಗಳಿಗೆ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಬೆಂಗಳೂರು[ಆ.18]: ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಪುತ್ರ ಸಮಿತ್‌ ದ್ರಾವಿಡ್‌ ದೇಸಿ ಟೂರ್ನಿಗಳಲ್ಲಿ ಆಕರ್ಷಕ ಪ್ರದರ್ಶನ ಮುಂದುವರಿಸಿದ್ದಾರೆ. ತಮ್ಮ ಅಮೋಘ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ತಂಡದ ಗೆಲುವಿನಲ್ಲಿ ಸಮಿತ್ ಪ್ರಮುಖ ಪಾತ್ರ ವಹಿಸಿದ್ದಾರೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಂಡರ್‌ 14 ಟೂರ್ನಿಯಲ್ಲಿ ಮಲ್ಯ ಅದಿತಿ ಇಂಟರ್’ನ್ಯಾಷನಲ್ ಸ್ಕೂಲ್’ನ ಸಮಿತ್‌, ಬೆತನೆ ಹೈಸ್ಕೂಲ್‌ ವಿರುದ್ಧ 81 ರನ್‌ ಬಾರಿಸಿದರು. ಜತೆಗೆ ಬೌಲಿಂಗ್’ನಲ್ಲಿ 12 ರನ್‌ಗಳಿಗೆ 3 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಇವರ ಆಲ್ರೌಂಡ್‌ ಆಟದ ನೆರವಿನಿಂದ ಮಲ್ಯ ಅದಿತಿ ಶಾಲೆ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.