`ಮೊದಲಿಗೆ ಅದ್ಬುತ ಪ್ರದರ್ಶನ ನೀಡಿರುವ ಭಾರತ ತಂಡವನ್ನ ನಾನು ಪ್ರಶಸಂಸಿಸುತ್ತೇನೆ. ಯುವ ಕ್ರಿಕೆಟಿಗ ಕರುಣ್ ನಾಯರ್ ತಮ್ಮ 3ನೇ ಇನ್ನಿಂಗ್ಸ್`ನಲ್ಲಿ ತ್ರಿಶತಕ ಸಿಡಿಸಿದ್ದಾರೆ. ಇದು ಯುವ ಕ್ರಿಕೆಟಿಗರ ಪರಿಶ್ರಮದ ಫಲ, ಇದರ ಹಿಂದೆ ಅಂಡರ್-19 ತಂಡದಲ್ಲಿ ಯುವಕರನ್ನ ಹುರಿಗೊಳಿಸಿದ ರಾಹುಲ್ ದ್ರಾವಿಡ್ ಅವರ ಶ್ರಮವೂ ಇದೆ. ಅಲ್ಲಿ ಸಿಕ್ಕ ಅತ್ಯುತ್ತಮ ತರಬೇತಿ ಈ ಪ್ರದರ್ಶನಕ್ಕೆ ಸಹಕಾರಿಯಾಗಿದೆ' ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ನವದೆಹಲಿ(ಡಿ.20): ನಿನ್ನೆ ಇಂಗ್ಲೆಂಡ್ ವಿರುದ್ಧ ಭರ್ಜರಿ ತ್ರಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್ ಸಾಧನೆಯನ್ನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಡಿ ಹೊಗಳಿದ್ಧಾರೆ. ಕರುಣ್ ನಾಯರ್ ಅವರ ಈ ಸಾಧನೆ ಹಿಂದೆ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ.
ಅಂಡರ್-19 ತಂಡದಲ್ಲಿ ರಾಹುಲ್ ದ್ರಾವಿಡ್ ನೀಡಿರುವ ತರಬೇತಿಯಿಂದಾಗಿ ಯುವ ಕ್ರಿಕೆಟಿಗರು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಠಾಕೂರ್ ಅಭಿಪ್ರಾಯಪಟ್ಟಿದ್ಧಾರೆ.