ಗೌತಮ್ ಗಂಭೀರ್ ಮೊದಲ ಟೆಸ್ಟ್​​​ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಹುಲ್​ಗೆ ಬುಲಾವ್ ಬಂದಿದೆ

ವಿಶಾಖಪಟ್ಟಣ(ನ.16): ಗುರುವಾರದಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗುವ ದ್ವಿತೀಯ ಟೆಸ್ಟ್​ಗೆ ಕರ್ನಾಟಕದ ಕೆಎಲ್ ರಾಹುಲ್ 16ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಗಾಯಾಳುವಾಗಿ ನ್ಯೂಜಿಲೆಂಡ್ ಸರಣಿ ಮಧ್ಯೆಯೇ ಹೊರ ನಡೆದಿದ್ದ ರಾಹುಲ್, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸಹ ಆಡಿರಲಿಲ್ಲ. ಸದ್ಯ ವೈಜಾಕ್​ನಲ್ಲೇ ರಾಜಸ್ಥಾನ ವಿರುದ್ಧ ರಣಜಿ ಟ್ರೋಫಿ ಪಂದ್ಯವಾಡುತ್ತಿದ್ದಾರೆ. 

ಆ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಮತ್ತು 2ನೇ ಇನ್ನಿಂಗ್ಸ್​​ನಲ್ಲಿ ಶತಕ ಬಾರಿಸಿ ಫಿಟ್​ನೆಸ್ ಸಾಬೀತು ಪಡಿಸಿದ್ದಾರೆ. ಗೌತಮ್ ಗಂಭೀರ್ ಮೊದಲ ಟೆಸ್ಟ್​​​ನಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಹುಲ್​ಗೆ ಬುಲಾವ್ ಬಂದಿದೆ. ಹೀಗಾಗಿ ಗೌತಿ 2ನೇ ಟೆಸ್ಟ್​ ಆಡೋದು ಬಹುತೇಕ ಅನುಮಾನ.