ರಾಹ್ಕೀಮ್ ಕಾರ್ನ್'ವೆಲ್  ಮಾಮೂಲಿ ಕ್ರಿಕೆಟಿನೇನಲ್ಲ. ಈತನ ತೂಕ ಬರೋಬ್ಬರಿ 143 ಕೆಜಿ. ವಿಶ್ವ ಕ್ರಿಕೆಟ್'ನಲ್ಲೇ ಈತನಷ್ಟು ತೂಕವಿರುವ ವ್ಯಕ್ತಿ ಮತ್ಯಾರಿಲ್ಲ.

ಜಮೈಕಾ(ಸೆ.02): ದೈತ್ಯರು ಸಿಕ್ಸ್'ರ್ ಸಿಡಿಸುವುದನ್ನು ನೋಡಿದ್ದೇವೆ. ದೈತ್ಯರಲ್ಲೇ ದೈತ್ಯ ಸಿಕ್ಸ್'ರ್'ಗಳು ಹಾಗೂ ಬೌಂಡರಿಗಳ ಸುರಿಮಳೆ ಸುರಿಸಿ ದಾಖಲೆ ಬರೆದಿದ್ದಾನೆ.

ರಾಹ್ಕೀಮ್ ಕಾರ್ನ್'ವೆಲ್ ಮಾಮೂಲಿ ಕ್ರಿಕೆಟಿನೇನಲ್ಲ. ಈತನ ತೂಕ ಬರೋಬ್ಬರಿ 143 ಕೆಜಿ. ವಿಶ್ವ ಕ್ರಿಕೆಟ್'ನಲ್ಲೇ ಈತನಷ್ಟು ತೂಕವಿರುವ ವ್ಯಕ್ತಿ ಮತ್ಯಾರಿಲ್ಲ. ನಿನ್ನೆ ಆ.1 ರಂ ಕೆರೆಬಿಯನ್ ಕ್ರಿಕೆಟ್ ಲೀಗ್'ನಲ್ಲಿ ಸೇ. ಲೂಯಿಸ್ ಸ್ಟಾರ್ ಪರ ಆಡಿತ ಈತ ಬಾರ್ಬೋ'ಡಾಸ್ ಟ್ರಿಡೆಂಟ್ಸ್ ತಂಡದ ವಿರುದ್ಧ 44 ಎಸತೆಗಳಲ್ಲಿ ಅಜೇಯನಾಗಿ 78 ರನ್ ಸಿಡಿಸಿದ್ದಾನೆ. ಈತನ ಅಷ್ಟು ರನ್'ಗಳಲ್ಲಿ 6 ಭರ್ಜರಿ ಸಿಕ್ಸ್'ರ್'ಗಳಿ ಹಾಗೂ 7 ಸ್ಫೋಟಕ ಬೌಂಡರಿಗಳಿದ್ದವು. ಪೂರ್ತಿ ಸಮಯ ಆಟವಾಡದೆ 18ನೇ ಓವರ್'ಗಳಲ್ಲಿ ಗಾಯಗೊಂಡು ನಿವೃತ್ತನಾದ.ಟ್ರಿಡೆಂಟ್ಸ್ ತಂಡ ನೀಡಿದ 195 ರನ್'ಗಳ ಸವಾಲನ್ನು ಬೆನ್ನಟ್ಟಿದ ಲೂಯಿಸ್ ಸ್ಟಾರ್ ತಂಡ 164 ರನ್'ಗಳನ್ನು ಮಾತ್ರ ಗಳಿಸಿತು. ಸೋತರೂ ಪಂದ್ಯದಲ್ಲಿ ಮಿಂಚಿದ್ದು ದೈತ್ಯ ರಾಹ್ಕೀಮ್ ಕಾರ್ನ್'ವೆಲ್.