ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಬೆನ್ನಲ್ಲೇ ರಬಾಡಗೆ ICC ಶಾಕ್

sports | Tuesday, March 13th, 2018
Suvarna Web Desk
Highlights

ಆಸೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್'ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ್ದ ರಬಾಡ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.

ಪೋರ್ಟ್ ಎಲೆಜಿಬೆತ್(ಮಾ.13): ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ವೇಳೆ ಡೇವಿಡ್ ವಾರ್ನರ್‌'ರನ್ನು ಔಟ್ ಮಾಡಿದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕಾಗಿ, ದ.ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರನ್ನು 2 ಪಂದ್ಯಗಳಿಗೆ ನಿಷೇಧಗೊಳಿಸಲಾಗಿದೆ.

24 ತಿಂಗಳೊಳಗೆ 8 ಡೀಮೆರಿಟ್ ಅಂಕಗಳನ್ನು ಪಡೆದ ಕಾರಣ ರಬಾಡ ವಿರುದ್ಧ ಐಸಿಸಿ ಈ ಕ್ರಮಕೈಗೊಂಡಿದೆ. 2ನೇ ಟೆಸ್ಟ್‌'ನ ಮೊದಲ ಇನ್ನಿಂಗ್ಸ್ ವೇಳೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್‌'ರನ್ನು ರಬಾಡ ಉದ್ದೇಶಪೂರ್ವಕವಾಗಿ ತಳ್ಳಿದ್ದರು. ಪಂದ್ಯ ರೆಫ್ರಿ ನಡೆಸಿದ ವಿಚಾರಣೆ ವೇಳೆ ರಬಾಡ ತಪ್ಪೊಪ್ಪಿಕೊಂಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಸೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್'ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ್ದ ರಬಾಡ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.

Comments 0
Add Comment

  Related Posts

  Election War Modi Vs Siddu

  video | Thursday, March 15th, 2018

  BSY Vs Siddaramaiah

  video | Tuesday, February 27th, 2018

  Tiger Vs Elephant

  video | Thursday, February 15th, 2018

  Election War Modi Vs Siddu

  video | Thursday, March 15th, 2018
  Suvarna Web Desk