ಇದು ತವರಿನ ಅಂಗಣದಲ್ಲಿ ಅಶ್ವಿನ್ ಅವರ ಎರಡನೇ ಅತಿ ಕೆಟ್ಟ ಪ್ರದರ್ಶನವಾಗಿದೆ. ಎರಡು ಇನಿಂಗ್ಸ್‌'ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ 230ರನ್‌ಗಳನ್ನು ನೀಡಿ ಕೇವಲ 3 ವಿಕೆಟ್ ಪಡೆದಿದ್ದಾರೆ.

ರಾಜ್‌ಕೋಟ್(ನ.14): ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನೀರಸ ಬೌಲಿಂಗ್‌ ಮಾಡುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ತವರಿನ ಅಂಗಣದಲ್ಲಿ ಅಶ್ವಿನ್ ಅವರ ಎರಡನೇ ಅತಿ ಕೆಟ್ಟ ಪ್ರದರ್ಶನವಾಗಿದೆ. ಎರಡು ಇನಿಂಗ್ಸ್‌'ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ 230ರನ್‌ಗಳನ್ನು ನೀಡಿ ಕೇವಲ 3 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಸರಾಸರಿ (76.66) ಆಗಿತ್ತು.

ಈ ಹಿಂದಿನ ಟೆಸ್ಟ್ ಸರಣಿ ಕಾನ್ಪುರದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 225ರನ್ ನೀಡಿದ್ದರು.

2012ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ (83.50)ಯ ಸರಾಸರಿ ಹೊಂದಿದ್ದರು.