‘ನಾನು ಹೆಚ್ಚಾಗಿ ತಪ್ಪು ಮಾಡಿಲ್ಲ. ಆದಕಾರಣ ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎನ್ನುವ ನಂಬಿಕೆ ಇದೆ. ನನಗೆ ಅವಕಾಶ ಸಿಕ್ಕಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದೇನೆ’
ಚೆನ್ನೈ(ಅ.10): ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎಂದು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭರವಸೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲಿ ಅಶ್ವಿನ್'ಗೆ ಸ್ಥಾನ ನೀಡಲಾಗಿಲ್ಲ. ಅಲ್ಲದೇ ಅವರ ಬದಲಿಗೆ ತಂಡ ಕೂಡಿಕೊಂಡಿರುವ ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ಅಶ್ವಿನ್'ರ ಭವಿಷ್ಯದ ಕುರಿತು ಪ್ರಶ್ನೆ ಉದ್ಭವಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅಶ್ವಿನ್, ‘ನಾನು ಹೆಚ್ಚಾಗಿ ತಪ್ಪು ಮಾಡಿಲ್ಲ. ಆದಕಾರಣ ಅವಕಾಶಗಳು ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿವೆ ಎನ್ನುವ ನಂಬಿಕೆ ಇದೆ. ನನಗೆ ಅವಕಾಶ ಸಿಕ್ಕಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದೇನೆ’ ಎಂದಿದ್ದಾರೆ.
