2016ನೇ ಸಾಲಿನ ಐಸಿಸಿ ಕ್ರಿಕೆಟಿಗ ಹಾಗೂ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿರುವ ಅಶ್ವಿನ್, ಪ್ರಶಕ್ತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ.

ನವದೆಹಲಿ(ಫೆ.08): ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ 250 ವಿಕೆಟ್ ಸಾಧನೆಗೆ ಇನ್ನೆರಡು ವಿಕೆಟ್‌ಗಳು ಬೇಕಾಗಿವೆ.

ಅಶ್ವಿನ್ 44 ಟೆಸ್ಟ್ ಪಂದ್ಯಗಳಿಂದ 284ವಿಕೆಟ್ ಪಡೆದಿದ್ದಾರೆ. ಇನ್ನು 2 ವಿಕೆಟ್ ಪಡೆದರೆ, ವೇಗದ 250 ವಿಕೆಟ್ ಪಡೆದ ಸಾಧನೆ ಅಶ್ವಿನ್ ಹೆಸರಿನಲ್ಲಿ ಸೇರಲಿದೆ. ಈ ಮೊದಲು ಆಸೀಸ್ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಕ್ರಮವಾಗಿ 48 ಮತ್ತು 49 ಪಂದ್ಯಗಳಲ್ಲಿ 250 ವಿಕೆಟ್'ಗಳ ಮೈಲಿಗಲ್ಲನ್ನು ಮುಟ್ಟಿದ್ದಾರೆ.

ಹೈದರಾಬಾದ್‌'ನಲ್ಲಿ ಗುರುವಾರದಿಂದ ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಚೆನ್ನೈ ಮೂಲದ ಅಶ್ವಿನ್ 2016ರಲ್ಲಿ 12 ಪಂದ್ಯಗಳಿಂದ 72 ವಿಕೆಟ್ ಕಿತ್ತಿದ್ದರು. ಇದು ಅಶ್ವಿನ್ ಅವರಿಗೆ ವಿಶ್ವ ಕ್ರಿಕೆಟ್‌'ನಲ್ಲಿ ವೇಗವಾಗಿ ವಿಕೆಟ್ ಪಡೆಯುತ್ತಿರುವ ಮೊದಲ ಬೌಲರ್ ಎಂಬ ಶ್ರೇಯಕ್ಕೆ ಕಾರಣವಾಗಿದೆ.

2016ನೇ ಸಾಲಿನ ಐಸಿಸಿ ಕ್ರಿಕೆಟಿಗ ಹಾಗೂ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿರುವ ಅಶ್ವಿನ್, ಪ್ರಶಕ್ತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ.