ಅಶ್ವಿನ್'ಗೆ ‘ಐಕಾನ್ ಆಫ್ ಚೆನ್ನೈ’ ಪ್ರಶಸ್ತಿ

sports | Sunday, February 18th, 2018
Suvarna Web Desk
Highlights

ಅಶ್ವಿನ್‌ಗೆ ‘ಐಕಾನ್ ಆಫ್ ಚೆನ್ನೈ’ ಪ್ರಶಸ್ತಿ ವಿತರಿಸಿದ ಅವರು, ‘ಅಶ್ವಿನ್ ಮಾಡಿರುವ ಸಾಧನೆಗಳನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಶ್ವಿನ್, ತಮಿಳುನಾಡು ಹಾಗೂ ಭಾರತದ ಹೆಮ್ಮೆ. ಅಶ್ವಿನ್ ಅವರನ್ನು ಗೌರವಿಸಿದ್ದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ಕಿರ್ಮಾನಿ ಹೇಳಿದರು.

ಚೆನ್ನೈ(ಫೆ.18): ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಸಾಧನೆ ಮತ್ತು ಆಟದ ಮೇಲಿನ ಅವರ ಸಮರ್ಪಣಾ ಮನೋಭಾವ ಇಂದಿನ ಯುವಕರಿಗೆ ಮಾದರಿಯಾದುದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಶ್ವಿನ್‌ಗೆ ‘ಐಕಾನ್ ಆಫ್ ಚೆನ್ನೈ’ ಪ್ರಶಸ್ತಿ ವಿತರಿಸಿದ ಅವರು, ‘ಅಶ್ವಿನ್ ಮಾಡಿರುವ ಸಾಧನೆಗಳನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ಅವರಿಗೆ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅಶ್ವಿನ್, ತಮಿಳುನಾಡು ಹಾಗೂ ಭಾರತದ ಹೆಮ್ಮೆ. ಅಶ್ವಿನ್ ಅವರನ್ನು ಗೌರವಿಸಿದ್ದು ಅತ್ಯಂತ ಹೆಮ್ಮೆಯ ಸಂಗತಿ’ ಎಂದು ಕಿರ್ಮಾನಿ ಹೇಳಿದರು.

Comments 0
Add Comment

    Related Posts

    BJP Leader R Ashok Slams CM Siddaramaiah

    video | Monday, March 26th, 2018
    Suvarna Web Desk