ಅಶ್ವಿನ್ ಸ್ಟಾರ್ಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಬೆಂಗಳೂರು(ಮಾ.07): ತನ್ನ ತಮಿಳುನಾಡು ಸಹಪಾಠಿಗೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮಾಡಿದ ಅವಮಾನಕ್ಕೆ ಬೌಲಿಂಗ್'ನಲ್ಲಿಯೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಹೌದು ಆಸೀಸ್ ವಿರುದ್ಧದ ಎರಡನೇ ಟೆಸ್ಟ್'ನ ಎರಡನೇ ಇನಿಂಗ್ಸ್'ನಲ್ಲಿ ಟೀಂ ಇಂಡಿಯಾ ಆಟಗಾರ ಅಭಿನವ್ ಮುಕುಂದ್ ಬ್ಯಾಟಿಂಗ್ ಮಾಡುತ್ತಿದ್ದರು. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಮುಕುಂದ್ ಬ್ಯಾಟ್ ಎಡ್ಜ್ ಸವರಿ ಸಿಕ್ಸರ್ ಗೆರೆ ದಾಟಿತು. ಆವೇಳೆ ಸ್ಟಾರ್ಕ್ ತಲೆ ಬಳಸು ಎಂಬರ್ಥದಲ್ಲಿ ಬೆರಳನ್ನು ಹಣೆಗೆ ತೋರಿಸಿದ್ದರು.

ಅದಕ್ಕೆ ತಕ್ಕ ತಿರುಗೇಟು ನೀಡಿದ ಅಶ್ವಿನ್ ಸ್ಟಾರ್ಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಹೀಗಿತ್ತ ಆ ಕ್ಷಣ...