ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಕಿಯನ್ ಬಿನ್ ವಿರುದ್ಧ 21-11,21-8 ಅಂತರದ ಸುಲಭ ಗೆಲುವು ಸಾಧಿಸಿದ ಭಾರತದ ಅಜಯ್ ಜಯರಾಮ್ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ಕೌಲಾಲಂಪುರ(ಏ.05): ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಮಲೇಷ್ಯಾ ಓಪನ್ ಸೂಪರ್ ಸೀರಿಸ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲು ಅನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ನಾಲ್ಕನೇ ಶ್ರೇಯಾಂಕಿತೆ ಜಪಾನ್‌'ನ ಅಕಾನೆ ಯಮಗೂಚಿ ವಿರುದ್ಧ ಸೈನಾ, 21-19, 13-21,15-21 ಗೇಮ್‌'ಗಳಲ್ಲಿ ಸೋಲು ಅನುಭವಿಸಿದರೆ, ಸಿಂಧು ಚೀನಾದ ಚೆನ್ ಯೂಫಿ ವಿರುದ್ಧ 21-18, 19-21, 17-21 ಗೇಮ್‌'ಗಳಲ್ಲಿ ಪರಾಭವಗೊಂಡರು.

ಕಳೆದ ವಾರವಷ್ಟೇ ಭಾರತೀಯ ಓಪನ್ ಸೂಪರ್ ಸೀರಿಸ್ ಕ್ವಾರ್ಟರ್ ಫೈನಲ್‌'ನಲ್ಲಿ ಸೈನಾ ಮಣಿಸಿದ್ದ ಸಿಂಧು, ಫೈನಲ್‌'ನಲ್ಲಿ ಒಲಿಂಪಿಕ್ ಚಾಂಪಿಯನ್ ಸ್ಪೇನ್‌'ನ ಕ್ಯಾರೊಲಿನಾ ಮರಿನ್ ಅವರ ಸವಾಲನ್ನು ಮೆಟ್ಟಿನಿಂತು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಕಿಯನ್ ಬಿನ್ ವಿರುದ್ಧ 21-11,21-8 ಅಂತರದ ಸುಲಭ ಗೆಲುವು ಸಾಧಿಸಿದ ಭಾರತದ ಅಜಯ್ ಜಯರಾಮ್ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.