ನವದೆಹಲಿ(ನ.19): ಹಾಲಿ ಚಾಂಪಿಯನ್ ಪಿ.ವಿ.ಸಿಂಧು, ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 23 ವರ್ಷದ ಸಿಂಧು, ಡಿಸೆಂಬರ್‌ನಲ್ಲಿ ಚೀನಾದ ಗುವಾಂಗ್ಜೌನಲ್ಲಿ ನಡೆಯಲಿರುವ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರಕೈಗೊಂಡಿರುವುದಾಗಿ ಹೇಳಿದ್ದಾರೆ. 

ವಿಶ್ವ ನಂ.3 ಸಿಂಧು, ‘ವರ್ಲ್ಡ್ ಟೂರ್ ಫೈನಲ್ಸ್‌ಗೆ ಸಿದ್ಧತೆ ನಡೆಸುವುದಕ್ಕೆ ಹೆಚ್ಚು ಗಮನಹರಿಸಬೇಕಿದೆ. ಹಾಗಾಗಿ ಸಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿಯಲು ಅನುಮತಿ ನೀಡಬೇಕು ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ)ಗೆ ಸಿಂಧು ಪತ್ರ ಬರೆದಿದ್ದಾರೆ’ ಎಂದು ಸಿಂಧು ಅವರ ತಂದೆ ಹೇಳಿದ್ದಾರೆ.

ಸಿಂಧೂ ಮನವಿಯನ್ನ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಪುರಸ್ಕರಿಸಿದೆ. ಹೀಗಾಗಿ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.