ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಜಪಾನಿನ ಮಿನತ್ಸು ಮಿತಾನಿ ವಿರುದ್ಧ 21-19, 18-21, 21-10 ಸೆಟ್'ಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಸೋಲ್(ಸೆ.15): ಗೆಲುವಿನ ಓಟ ಮುಂದುವರಿಸಿರುವ ಭಾರತದ ಪಿ.ವಿ. ಸಿಂಧು ಮತ್ತು ಸಮೀರ್ ವರ್ಮಾ ಅವರು ಕೊರಿಯಾ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್'ಗೆ ಲಗ್ಗೆ ಇಟ್ಟಿದ್ದಾರೆ.
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ಜಪಾನಿನ ಮಿನತ್ಸು ಮಿತಾನಿ ವಿರುದ್ಧ 21-19, 18-21, 21-10 ಸೆಟ್'ಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.
ಇನ್ನು ಮತ್ತೋರ್ವ ಭಾರತದ ಭರವಸೆಯ ಆಟಗಾರ ಸಮೀರ್ ವರ್ಮಾ ಹಾಂಗ್ ಕಾಂಗ್'ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ 21-19, 21-13 ನೇರ ಸೆಟ್'ನಲ್ಲಿ ಜಯಭೇರಿ ಬಾರಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.