21 ವರ್ಷದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಹೈದರಾಬಾದ್'ನ ಬಿಪಿಸಿಎಲ್ ಕಚೇರಿಯಲ್ಲಿ 2013ರಿಂದ ಸಹಾಯಕ ಮ್ಯಾನೇಜರ್(ಕ್ರೀಡೆ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಲಿಂಪಿಕ್ ಪದಕ ವಿಜೇತೆಗೆ ತೆಲಂಗಾಣ ಸರ್ಕಾರ 5 ಕೋಟಿ, ಆಂಧ್ರಪ್ರದೇಶ ಸರ್ಕಾರ 3 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.
ಹೈದರಾಬಾದ್(ಜು.27): ರಿಯೋ ಒಲಿಂಪಿಕ್'ನ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಅಂಧ್ರಪ್ರದೇಶದ ಗ್ರೂಪ್-1 ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಿಂಧು ಅವರಿಗೆ ಈ ಬಗ್ಗೆ ನೇಮಕ ಪತ್ರ ವಿತರಿಸಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
21 ವರ್ಷದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಹೈದರಾಬಾದ್'ನ ಬಿಪಿಸಿಎಲ್ ಕಚೇರಿಯಲ್ಲಿ 2013ರಿಂದ ಸಹಾಯಕ ಮ್ಯಾನೇಜರ್(ಕ್ರೀಡೆ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಲಿಂಪಿಕ್ ಪದಕ ವಿಜೇತೆಗೆ ತೆಲಂಗಾಣ ಸರ್ಕಾರ 5 ಕೋಟಿ, ಆಂಧ್ರಪ್ರದೇಶ ಸರ್ಕಾರ 3 ಕೋಟಿ ನಗದು ಬಹುಮಾನವನ್ನು ಘೋಷಿಸಿದೆ.
ಒಲಿಂಪಿಕ್ ಇತಿಹಾಸದಲ್ಲಿ ಸಿಂಧು ಅವರು ಕರ್ಣನ್ ಮಲ್ಲೇಶ್ವರಿ, ಮೇರಿ ಕೋಮ್, ಸೈನಾ ನೆಹ್ವಾಲ್ ಹಾಗೂ ಸಾಕ್ಷಿ ಮಲ್ಲಿಕ್ ನಂತರ ಪದಕ ಗೆದ್ದ 5ನೇ ಆಟಗಾರ್ತಿಯಾಗಿದ್ದಾರೆ.