ತಿರುವನಂತಪುರಂ(ಜು.26): ಭಾರತೀಯ ಅಥ್ಲೆಟಿಕ್ ಫೆಡರೇಷನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಕೇರಳದ ಅಥ್ಲೀಟ್ ಪಿ.ಯು.ಉಷಾ ಮುಂದಾಗಿದ್ದಾರೆ.

ಅರ್ಹತೆ ಪಡೆದಿದ್ದರೂ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌'ಗೆ ಭಾರತ ತಂಡದಿಂದ ಕೈ ಬಿಟ್ಟ ಫೆಡರೇಷನ್‌'ನ ಕ್ರಮವನ್ನು ಪ್ರಶ್ನಿಸಿ ಚಿತ್ರಾ ಸೇರಿದಂತೆ ಕೇರಳದ ಮೂವರು ಅಥ್ಲೀಟ್‌'ಗಳು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಭುವನೇಶ್ವರದಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌'ನಲ್ಲಿ 1,500 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದ ಚಿತ್ರಾ, ವಿಶ್ವ ಚಾಂಪಿಯನ್‌'ಶಿಪ್‌'ಗೆ ಅರ್ಹತೆ ಗಿಟ್ಟಿಸಿದ್ದರು.