ಪ್ರೊ-ಕಬಡ್ಡಿ ಪಂದ್ಯಾವಳಿ ಈ ವರ್ಷ ಜುಲೈನಲ್ಲಿ ನಡೆಯಲಿದ್ದು ತಮಿಳುನಾಡು, ಗುಜರಾತ್,ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯದ ಖಾಸಗಿ ಸಂಸ್ಥೆಗಳು ತಂಡಗಳ ಮಾಲೀಕತ್ವ ಪಡೆದುಕೊಳ್ಳುವ ನಿರೀಕ್ಷೆ ಇದೆ.
ನವದೆಹಲಿ(ಮಾ.30): ಪ್ರೊ-ಕಬಡ್ಡಿ 5ನೇ ಆವೃತ್ತಿಗೆ ಸದ್ಯ ಇರುವ ಎಂಟು ತಂಡಗಳ ಜತೆಗೆ ನಾಲ್ಕು ಹೊಸ ತಂಡಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಪಂದ್ಯಾವಳಿ ಆಯೋಜಕರು ತಿಳಿಸಿದ್ದಾರೆ.
ಕಳೆದ ನಾಲ್ಕು ಆವೃತ್ತಿಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಪ್ರೊ-ಕಬಡ್ಡಿ ಪಂದ್ಯಾವಳಿ ಈ ವರ್ಷ ಜುಲೈನಲ್ಲಿ ನಡೆಯಲಿದ್ದು ತಮಿಳುನಾಡು, ಗುಜರಾತ್,ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯದ ಖಾಸಗಿ ಸಂಸ್ಥೆಗಳು ತಂಡಗಳ ಮಾಲೀಕತ್ವ ಪಡೆದುಕೊಳ್ಳುವ ನಿರೀಕ್ಷೆ ಇದೆ.
ನಾಲ್ಕು ಹೊಸ ತಂಡಗಳ ಸೇರ್ಪಡೆ ಬಳಿಕ 5ನೇ ಆವತ್ತಿಯಲ್ಲಿ ಒಟ್ಟು 130ಕ್ಕೂ ಹೆಚ್ಚಿನ ಪಂದ್ಯಗಳು ನಡೆಯಲಿದ್ದು, 13 ವಾರಗಳ ಕಾಲ ಪಂದ್ಯಾವಳಿ ನಡೆಸಲು ಆಯೋಜಕರು ಚಿಂತನೆ ನಡೆಸಿದ್ದಾರೆ.
