Pro Kabaddi League: ಸೋಲಿನ ಸರಪಳಿ ಕಳಚಿ ಗೆದ್ದ ತೆಲುಗು ಟೈಟಾನ್ಸ್
ಟೂರ್ನಿಯುದ್ದಕ್ಕೂ ಮಾಡಿದ್ದ ಹಲವು ತಪ್ಪುಗಳನ್ನು ಟೈಟಾನ್ಸ್ ಈ ಪಂದ್ಯದಲ್ಲಿ ಪುನರಾವರ್ತಿಸಲಿಲ್ಲ. ಆರಂಭದಲ್ಲೇ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟ ಟೈಟಾನ್ಸ್ ಆಟಗಾರರು ಮೊದಲಾರ್ಧಕ್ಕೆ 21-20 ಅಂಕಗಳಿಂದ ಮುನ್ನಡೆ ಸಾಧಿಸಿದರು.
ಚೆನ್ನೈ(ಡಿ.23): ಸತತ 5 ಸೋಲಿನೊಂದಿಗೆ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹೀನಾಯ ಆರಂಭ ಪಡೆದಿದ್ದ ತೆಲುವು ಟೈಟಾನ್ಸ್ ಕೊನೆಗೂ ಗೆಲುವಿನ ಸಿಹಿ ಅನುಭವಿಸಿದೆ. ಶುಕ್ರವಾರ ಬಲಿಷ್ಠ ಹರ್ಯಾಣ ಸ್ಟೀಲರ್ಸ್ ವಿರುದ್ಧ ಟೈಟಾನ್ಸ್‌ಗೆ 37-36 ಅಂಕಗಳ ಗೆಲುವು ಲಭಿಸಿತು.
ಟೂರ್ನಿಯುದ್ದಕ್ಕೂ ಮಾಡಿದ್ದ ಹಲವು ತಪ್ಪುಗಳನ್ನು ಟೈಟಾನ್ಸ್ ಈ ಪಂದ್ಯದಲ್ಲಿ ಪುನರಾವರ್ತಿಸಲಿಲ್ಲ. ಆರಂಭದಲ್ಲೇ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟ ಟೈಟಾನ್ಸ್ ಆಟಗಾರರು ಮೊದಲಾರ್ಧಕ್ಕೆ 21-20 ಅಂಕಗಳಿಂದ ಮುನ್ನಡೆ ಸಾಧಿಸಿದರು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡ ಟೈಟಾನ್ಸ್, ಯಾವ ಕ್ಷಣದಲ್ಲೂ ಹರ್ಯಾಣಕ್ಕೆ ಹೆಚ್ಚಿನ ಅಂಕ ಗಳಿಸುವ ಅವಕಾಶ ನೀಡಲಿಲ್ಲ. ಪವನ್ ಶೆರಾವತ್ ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರೆ, ಡಿಫೆಂಡರ್‌ಗಳು ಸುಧಾರಿತ ಆಟ ಪ್ರದರ್ಶಿಸಿದರು.
ದೀರ್ಘಕಾಲದ ಸ್ನೇಹಿತನ ವಿವಾಹವಾದ ಭಾರತದ ನಂ.1 ಟೆನಿಸ್ ಆಟಗಾರ್ತಿ!
ಪವನ್ 21 ರೈಡ್‌ಗಳಲ್ಲಿ 10 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಅಜಿತ್ ಪವಾರ್ 7, ಸಂದೀಪ್ 5 ಟ್ಯಾಕಪ್ ಅಂಕ ಪಡೆದರು. ಹರ್ಯಾಣದ ರೈಡರ್‌ಗಳಾದ ಶಿವಂ(12), ವಿನಯ್(09) ಹೋರಾಟ ಫಲ ನೀಡಲಿಲ್ಲ.
ಪಾಟ್ನಾಗೆ ಶರಣಾದ ತಮಿಳ್ ತಲೈವಾಸ್
ತವರಿನಲ್ಲಿ ಶುಭಾರಂಭ ಮಾಡುವ ತಮಿಳ್ ತಲೈವಾಸ್ ತಂಡದ ಕನಸು ಭಗ್ನಗೊಂಡಿದೆ. ಶುಕ್ರವಾರ ಪಾಟ್ನಾ ಪೈರೇಟ್ಸ್ ವಿರುದ್ಧ ತಲೈವಾಸ್‌ಗೆ 33-46 ಅಂಕಗಳ ಸೋಲು ಎದುರಾಯಿತು. ಇದು ಪಾಟ್ನಾಗೆ ಟೂರ್ನಿಯ 3ನೇ ಗೆಲುವು. ಪಂದ್ಯದ ಆರಂಭದಿಂದಲೂ ಇತ್ತಂಡಗಳು ತೀವ್ರ ಪೈಪೋಟಿ ನಡೆಸಿದ್ದವು. ಮೊದಲಾರ್ಧಕ್ಕೆ ಪಾಟ್ನಾ 21-20ರಲ್ಲಿ ಅಲ್ಪ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪ್ರಾಬಲ್ಯ ಸಾಧಿಸಿದ ಪಾಟ್ನಾ, ತಲೈವಾಸ್‌ಗೆ ಗೆಲುವು ನಿರಾಕರಿಸಿತು. ಸುಧಾಕರ್ 11, ಮಂಜೀತ್ 8 ರೈಡ್ ಅಂಕಗಳನ್ನು ಗಳಿಸಿ ಪಾಟ್ನಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಡಬ್ಲ್ಯುಎಫ್‌ಐಗೆ ಅಧ್ಯಕ್ಷರ ಆಯ್ಕೆ, ಪದ್ಮಶ್ರಿ ಪ್ರಶಸ್ತಿ ಪ್ರಧಾನಿಗೆ ವಾಪಸ್ ನೀಡಲು ಬಂದ ಭಜರಂಗ್ ಪೂನಿಯಾ!
ಇಂದಿನ ಪಂದ್ಯಗಳು
ತಮಿಳ್ ತಲೈವಾಸ್-ಜೈಪುರ, ರಾತ್ರಿ 8ಕ್ಕೆ
ಗುಜರಾತ್ ಜೈಂಟ್ಸ್-ಯುಪಿ ಯೋಧಾಸ್, ರಾತ್ರಿ 9ಕ್ಕೆ
ರಾಷ್ಟ್ರೀಯ ಬ್ಯಾಡ್ಮಿಂಟನ್: ರಾಜ್ಯದ ಆಯುಶ್‌ಗೆ ಜಯ
ಗುವಾಹಟಿ: ಇಲ್ಲಿ ನಡೆಯುತ್ತಿರುವ 85ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಆಯುಶ್ ಶೆಟ್ಟಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಪದಕ ವಿಜೇತ ಆಯುಶ್ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ನೀರ್ ನೆಹ್ವಾಲ್ ವಿರುದ್ಧ 23-25, 21-18, 21-12ರಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೇರಿದರು. ಇದೇ ವೇಳೆ ಲಕ್ಷ್ಯ ಸೇನ್ ಹಾಗೂ ಆಕರ್ಷಿ ಕಶ್ಯಪ್ ಕೂಡಾ 3ನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸೇನ್, ಟಿ.ಸಿದ್ಧಾರ್ಥ್ ವಿರುದ್ಧ 21-8, 21-5 ಅಂತರದಲ್ಲಿ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ರಿತುಪರ್ಣ ದಾಸ್ ವಿರುದ್ಧ ಕಶ್ಯಪ್ 21-18, 21-11ರಲ್ಲಿ ಜಯಭೇರಿ ಬಾರಿಸಿದರು.