Asianet Suvarna News Asianet Suvarna News

ದೀರ್ಘಕಾಲದ ಸ್ನೇಹಿತನ ವಿವಾಹವಾದ ಭಾರತದ ನಂ.1 ಟೆನಿಸ್‌ ಆಟಗಾರ್ತಿ!

ಭಾರತ  ತಂಡದ ನಂ.1 ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ವಿವಾಹವಾಗಿದ್ದಾರೆ. 30 ವರ್ಷದ ಅಂಕಿತಾ ರೈನಾ ದೀರ್ಘಕಾಲದ ಗೆಳೆಯ ಮಿಲಿಂದ್‌ ಶರ್ಮ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
 

India Number one Tennis Player Ankita Raina Marries Longtime boyfriend Milind Sharma san
Author
First Published Dec 22, 2023, 8:37 PM IST

ನವದೆಹಲಿ (ಡಿ.22): ಭಾರತದ ನಂ.1 ಟೆನಿಸ್‌ ಆಟಗಾರ್ತಿ ಅಂಕಿತಾ ರೈನಾ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಗೆಳೆಯ ಮಿಲಿಂದ್‌ ಶರ್ಮಾ ಅವರನ್ನು ಸರಳ ಸಮಾರಂಭದಲ್ಲಿ ಅಂಕಿತಾ ರೈನಾ ವರಿಸಿದ್ದಾರೆ.  ಅಂಕಿತಾ ಮತ್ತು ಮಿಲಿಂದ್ ವಿವಾಹವನ್ನು ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು. ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು 30 ವರ್ಷದ ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯ ನಮ್ಮಿಬ್ಬರನ್ನೂ ಇಲ್ಲಿಗೆ ಕರೆತಂದಿದೆ. ಜೋಡಿಯಾಗಿ ಹೊಸ ಪಯಣ ಆರಂಭಿಸುತ್ತಿರುವ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಅಂಕಿತಾ ಬರೆದುಕೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಅಂಕಿತಾ ಮತ್ತು ಮಿಲಿಂದ್ ಅವರನ್ನು ಶ್ಲಾಘಿಸಿ ಹಲವು ಕಾಮೆಂಟ್‌ಗಳು ಬಂದಿವೆ. ಹೊಸ ಪಯಣ ಅದ್ಭುತವಾಗಿರಲಿ ಎಂದು ಹಾರೈಸಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ.

ಅಂಕಿತಾ ರೈನಾ 2018 ರಿಂದ ಟೆನಿಸ್ ಆಡುತ್ತಿದ್ದಾರೆ. ಅವರು ಕೆಲವು ಸಮಯದಿಂದ ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಂಕಿತಾ ಡಬ್ಲ್ಯುಟಿಎ ಟೂರ್‌ನಲ್ಲಿ ಒಂದು ಪ್ರಶಸ್ತಿ ಮತ್ತು ಡಬ್ಲ್ಯುಟಿಎ 125 ಟೂರ್ನಿಯಲ್ಲಿ ಒಂದು ಟ್ರೋಫಿ ಗೆದ್ದಿದ್ದಾರೆ. ಅಂತರಾಷ್ಟ್ರೀಯ ಟೆನಿಸ್ ಫೆಡರೇಷನ್ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಅಂಕಿತಾ ಸಿಂಗಲ್ಸ್ ನಲ್ಲಿ 11 ಟ್ರೋಫಿ ಹಾಗೂ ಡಬಲ್ಸ್ ನಲ್ಲಿ 25 ಟ್ರೋಫಿಗಳನ್ನು ಗೆದ್ದಿದ್ದಾರೆ. ಅದರೊಂದಿಗೆ ಫೆಡ್‌ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟು 'ಜೈ ಭಜರಂಗ್‌ ಬಲಿ' ಎಂದ ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಟಾರ್‌ ವೇಗಿ!

ಗುಜರಾತ್‌ ಮೂಲದ ಅಂಕಿತಾ ರೈನಾ ಈವರೆಗೂ ಯಾವುದೇ ಗ್ರ್ಯಾಂಡ್‌ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡಿಲ್ಲ. ಆಸ್ಟ್ರೇಲಿಯನ್‌ ಓಪನ್‌ ಹಾಗೂ ಯುಎಸ್‌ ಓಪನ್‌ ಟೂರ್ನಿಯಲ್ಲಿ ಕ್ವಾಲಿಫೈಯರ್‌-3 ಪಂದ್ಯದಲ್ಲಿ ಆಡಿದ್ದ ಅಂಕಿತಾ ರೈನಾ,  ವಿಂಬಲ್ಡನ್‌ನಲ್ಲಿ 2 ಬಾರಿ ಹಾಗೂ ಫ್ರೆಂಚ್‌ ಓಪನ್‌ನಲ್ಲಿ ಮೂರು ಬಾರಿ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಆಡಿದ್ದಾರೆ. ತಮ್ಮ ಕ್ರೀಡಾ ಜೀವನದಲ್ಲಿ 348 ಸಿಂಗಲ್ಸ್‌ ಪಂದ್ಯ ಗೆದ್ದಿರುವ ಅಂಕಿತಾ ರೈನಾ, 296 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಥಾಯ್ಲೆಂಡ್‌ನಲ್ಲಿ ಸೈನಾ ನೆಹ್ವಾಲ್‌, ಬೀಚ್‌ಸೈಡ್‌ನಲ್ಲಿ 'ಹಾಟ್‌' ಆದ ಬ್ಯಾಡ್ಮಿಂಟನ್‌ ಸುಂದರಿ!

Follow Us:
Download App:
  • android
  • ios