ಸ್ಟಾರ್ ಆಟಗಾರರನ್ನು ಕೈಬಿಟ್ಟ ಯು ಮುಂಬಾ, ತೆಲುಗು ಟೈಟಾನ್ಸ್..! ಬುಲ್ಸ್ ರೀಟೈನ್ ಮಾಡಿಕೊಂಡಿದ್ದು ಯಾರನ್ನು..?

First Published 9, Apr 2018, 9:07 PM IST
Pro Kabaddi League Season 6 List of retained players announced
Highlights

ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ 21 ಆಟಗಾರರನ್ನು ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಬೆಂಗಳೂರು ಬುಲ್ಸ್ ತಂಡವು ನಾಯಕ ರೋಹಿತ್ ಕುಮಾರ್'ರನ್ನು ಉಳಿಸಿಕೊಂಡಿದೆ.

ದೇಶದ ಅತಿದೊಡ್ಡ ಪ್ರಾದೇಶಿಕ ಕ್ರೀಡಾ ಟೂರ್ನಿ ಎನಿಸಿರುವ ಪ್ರೊ ಕಬಡ್ಡಿ ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿದ್ದು, ಇದೀಗ ಆರನೇ ಆವೃತ್ತಿಗೆ ಸಜ್ಜಾಗಿದೆ.

ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ 21 ಆಟಗಾರರನ್ನು ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಬೆಂಗಳೂರು ಬುಲ್ಸ್ ತಂಡವು ನಾಯಕ ರೋಹಿತ್ ಕುಮಾರ್'ರನ್ನು ಉಳಿಸಿಕೊಂಡಿದೆ. ಇನ್ನು ಯು ಮುಂಬಾ ಹಾಗೂ ತೆಲುಗು ಟೈಟಾನ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಕ್ರಮವಾಗಿ ತಮ್ಮ ಸ್ಟಾರ್ ಆಟಗಾರರಾದ ಅನೂಪ್ ಕುಮಾರ್, ರಾಹುಲ್ ಚೌಧರಿ ಹಾಗೂ ಮೋನು ಗೋಯೆತ್ ಅವರನ್ನು ಕೈಬಿಟ್ಟಿವೆ.

ರೀಟೈನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ:

ಬೆಂಗಾಲ್ ವಾರಿಯರ್ಸ್: ಸುರ್ಜೀತ್ ಸಿಂಗ್, ಮನೀಂದರ್ ಸಿಂಗ್

ಬೆಂಗಳೂರು ಬುಲ್ಸ್: ರೋಹಿತ್ ಕುಮಾರ್

ದಬಾಂಗ್ ಡೆಲ್ಲಿ: ಮೀರಾಜ್ ಶೇಖ್

ಗುಜರಾತ್ ಫಾರ್ಚೂನ್'ಜೈಂಟ್ಸ್: ಸಚಿನ್ ತನ್ವಾರ್, ಸುನಿಲ್ ಕುಮಾರ್, ಮಹೇಂದರ್ ಗಣೇಶ್ ರಜಪೂತ್

ಹರಿಯಾಣ ಸ್ಟೀಲರ್ಸ್: ಕುಲ್ದೀಪ್ ಸಿಂಗ್

ಪಾಟ್ನಾ ಪೈರೇಟ್ಸ್: ಪ್ರದೀಪ್ ನರ್ವಾಲ್, ಜೈದೀಪ್, ಜವಾಹರ್ ದಾಗರ್, ಮನೀಶ್ ಕುಮಾರ್

ಪುಣೇರಿ ಪಲ್ಟಾನ್: ಸಂದೀಪ್ ನರ್ವಾಲ್, ರಾಜೇಶ್ ಮೊಂಡಾಲ್, ಮೋರೆ ಜಿಬಿ, ಗಿರೀಶ್ ಎರ್ನಾಕ್.

ತಮಿಳ್ ತಲೈವಾಸ್: ಅಜಯ್ ಠಾಕೂರ್, ಅಮಿತ್ ಹೂಡಾ, ಸಿ. ಚರಣ್

ತೆಲಗು ಟೈಟಾನ್ಸ್: ನೀಲೇಶ್ ಸಾಲುಂಕೆ, ಮೋಯ್ಸೆನ್ ಮಗ್ಸೊದುಲ್'ಜಫ್ರಿ

loader