ಬುಲ್ಸ್‌ ಹೆಚ್ಚಾಗಿ ನೆಚ್ಚಿಕೊಂಡಿದ್ದ ಭರತ್‌ರನ್ನು ಜೈಂಟ್ಸ್‌ ರಕ್ಷಣಾಪಡೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು ಪಂದ್ಯದ ಹೈಲೈಟ್ಸ್‌. ಜೈಂಟ್ಸ್‌ 5 ಸೂಪರ್‌ ಟ್ಯಾಕಲ್‌ಗಳ ಪೈಕಿ ಮೂರನ್ನು ಭರತ್‌ ವಿರುದ್ಧವೇ ಮಾಡಿತು. ಮೊದಲಾರ್ಧದಲ್ಲಿ ಪ್ರಬಲ ಆಟವಾಡಿದ ಬುಲ್ಸ್‌ 20-14ರಲ್ಲಿ ಮುನ್ನಡೆಯಲ್ಲಿತ್ತು. ಆದರೆ 24ನೇ ನಿಮಿಷದಲ್ಲಿ ಮುನ್ನಡೆ ಪಡೆದ ಜೈಂಟ್ಸ್‌ ಕೊನೆವರೆಗೂ ಹಿಡಿತ ಕೈತಪ್ಪದಂತೆ ನೋಡಿಕೊಂಡಿತು.

ಅಹಮದಾಬಾದ್‌: ಆರಂಭದಲ್ಲಿ ಪ್ರದರ್ಶಿಸಿದ ಉತ್ತಮ ಆಟದ ಹೊರತಾಗಿಯೂ ಕೊನೆಯಲ್ಲಿ ಕೆಲ ಎಡವಟ್ಟುಗಳಿಂದಾಗಿ ಬೆಂಗಳೂರು ಬುಲ್ಸ್‌ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಸೋಲಿನ ಆರಂಭ ಪಡೆಯುವಂತಾಗಿದೆ. ಭಾನುವಾರ ಗುಜರಾತ್‌ ಜೈಂಟ್ಸ್ ವಿರುದ್ಧ 31-34 ಅಂಕಗಳ ಸೋಲು ಎದುರಾಯಿತು. ಜೈಂಟ್ಸ್‌ಗೆ ಇದು ಸತತ 2ನೇ ಜಯ.

ಬುಲ್ಸ್‌ ಹೆಚ್ಚಾಗಿ ನೆಚ್ಚಿಕೊಂಡಿದ್ದ ಭರತ್‌ರನ್ನು ಜೈಂಟ್ಸ್‌ ರಕ್ಷಣಾಪಡೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು ಪಂದ್ಯದ ಹೈಲೈಟ್ಸ್‌. ಜೈಂಟ್ಸ್‌ 5 ಸೂಪರ್‌ ಟ್ಯಾಕಲ್‌ಗಳ ಪೈಕಿ ಮೂರನ್ನು ಭರತ್‌ ವಿರುದ್ಧವೇ ಮಾಡಿತು. ಮೊದಲಾರ್ಧದಲ್ಲಿ ಪ್ರಬಲ ಆಟವಾಡಿದ ಬುಲ್ಸ್‌ 20-14ರಲ್ಲಿ ಮುನ್ನಡೆಯಲ್ಲಿತ್ತು. ಆದರೆ 24ನೇ ನಿಮಿಷದಲ್ಲಿ ಮುನ್ನಡೆ ಪಡೆದ ಜೈಂಟ್ಸ್‌ ಕೊನೆವರೆಗೂ ಹಿಡಿತ ಕೈತಪ್ಪದಂತೆ ನೋಡಿಕೊಂಡಿತು. ಕೊನೆ 2 ನಿಮಿಷಗಳಿರುವಾಗ ಬುಲ್ಸ್‌ 30-28ರಲ್ಲಿ ಮುಂದಿದ್ದರೂ, ಜೈಂಟ್ಸ್‌ 2 ಸೂಪರ್‌ ಟ್ಯಾಕಲ್‌ ಸೇರಿ 6 ಅಂಕ ಸಂಪಾದಿಸಿ ಗೆಲುವು ತನ್ನದಾಗಿಸಿಕೊಂಡಿತು. ಭರತ್‌ 16 ರೈಡ್‌ಗಳಲ್ಲಿ 7 ಅಂಕಗಳನ್ನಷ್ಟೇ ಗಳಿಸಿದರು. ಸೋನು(12 ಅಂಕ) ಮತ್ತೆ ಜೈಂಟ್ಸ್‌ ಪಾಲಿಗೆ ಆಪತ್ಬಾಂಧವರಾದರು.

ಇರ್ಫಾನ್ ಪಠಾಣ್ ಜತೆ ಡೇಟ್ ಮಾಡುತ್ತಿದ್ದಾಗ್ಲೆ, ಗಂಭೀರ್ ಪದೇ ಪದೇ ಮಿಸ್ ಕಾಲ್ ಕೊಡ್ತಿದ್ರು: ಹೊಸ ಬಾಂಬ್ ಸಿಡಿಸಿದ ಬಾಲಿವುಡ್ ಬೆಡಗಿ

ಡೆಲ್ಲಿಗೆ ಸೋಲು

ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ವಿರುದ್ಧ ತಮಿಳ್‌ ತಲೈವಾಸ್‌ 42-31 ಅಂಕಗಳ ಗೆಲುವು ಸಾಧಿಸಿತು. ಅಜಿಂಕ್ಯಾ ಪವಾರ್‌ 18 ರೈಡ್‌ ಅಂಕದೊಂದಿಗೆ ತಲೈವಾಸ್‌ಗೆ ಜಯ ತಂದುಕೊಟ್ಟರೆ, ಡೆಲ್ಲಿಯ ನವೀನ್‌(14 ಅಂಕ), ಅಶು ಮಲಿಕ್‌(09) ಹೋರಾಟ ವ್ಯರ್ಥವಾಯಿತು.

ಅಶ್ವಿನಿ-ತನಿಶಾ ರನ್ನರ್‌-ಅಪ್‌

ಲಖನೌ: ಸಯ್ಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೋ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಭಾನುವಾರ ನಡೆದ ಮಹಿಳಾ ಡಬಲ್ಸ್‌ ಫೈನಲ್‌ನಲ್ಲಿ ಭಾರತೀಯ ಜೋಡಿಯು ಜಪಾನ್‌ನ ರಿನ್‌ ಇವನಗ ಹಾಗೂ ಕೆ ನಕನಿಶಿ ವಿರುದ್ಧ 14-21, 21-17, 15-21 ಗೇಮ್‌ಗಳಲ್ಲಿ ಪರಾಭವಗೊಂಡಿತು.

ಭಾರತೀಯ ಕ್ರಿಕೆಟಿಗರು ಎಲ್ಲೆಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ ನೋಡಿ!

ಭಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆಕರ್ಷಕ ಆಟವಾಡಿದ ಹೊರತಾಗಿಯೂ ತನಗಿಂತ ರ್‍ಯಾಂಕಿಂಗ್‌ನಲ್ಲಿ ಮೇಲಿರುವ ಜಪಾನ್‌ ಜೋಡಿಯನ್ನು ಮಣಿಸಲು ಭಾರತೀಯ ಜೋಡಿಗೆ ಸಾಧ್ಯವಾಗಲಿಲ್ಲ. 20 ವರ್ಷದ ತನಿಶಾ ಪ್ರಬಲ ಸ್ಮ್ಯಾಶ್‌ಗಳ ಮೂಲಕ ಗಮನ ಸೆಳೆದರೆ, ಅಶ್ವಿನಿ ತಮ್ಮ ಅನುಭವಕ್ಕೆ ತಕ್ಕ ಆಟವಾಡಿದರು. ಆದರೆ ತಾಂತ್ರಿಕವಾಗಿ ಮೇಲುಗೈ ಸಾಧಿಸಿದ ಇವನಗ-ನಕನಶಿ ಪ್ರಶಸ್ತಿ ಬಾಚಿಕೊಂಡರು.