ಟಿವಿಯಲ್ಲಿ ಪ್ರೊ ಕಬಡ್ಡಿ ನೋಡಿ ವೃತ್ತಿಪರ ಆಟಗಾರನಾದ ಭರತ್ ಹೂಡಾ..!

10ನೇ ಆವೃತ್ತಿಯ ಪುಣೆ ಚರಣದ ವೇಳೆ ಭರತ್, ‘ಕನ್ನಡಪ್ರಭ’ದೊಂದಿಗೆ ತಮ್ಮ ಕಬಡ್ಡಿ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಹರ್ಯಾಣದ ರೋಹ್ಟಕ್‌ನ ಮಣ್ಣಿನ ಅಂಕಣ ಗಳಲ್ಲಿ ಟೈಂ ಪಾಸ್‌ಗೆ ಕಬಡ್ಡಿ ಆಡುತ್ತಿದ್ದ ಭರತ್, ಟೀವಿಯಲ್ಲಿ ಪ್ರೊ ಕಬಡ್ಡಿ ನೋಡಿದ ಮೇಲೆ ತಾವೂ ಮುಂದೆ ಈ ಲೀಗಲ್ಲಿ ಆಡಬೇಕು ಎಂದು ನಿರ್ಧರಿಸಿ, ಆಟವನ್ನು ಗಂಭೀರವಾಗಿ ಪರಿಗಣಿಸಿದರಂತೆ.

Pro Kabaddi League Bengaluru Bulls Raider Bharat Hooda inside Story kvn

- ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಡಿ.26): ಟೀವಿಯಲ್ಲಿ ಪ್ರೊ ಕಬಡ್ಡಿ ಲೀಗ್ ಪಂದ್ಯಗಳನ್ನು ನೋಡುತ್ತಾ, ‘ನಾನು ಒಂದು ದಿನ ಟೀವಿಯಲ್ಲಿ ಬರುವಂತೆ ಪ್ರೊ ಕಬಡ್ಡಿಯಲ್ಲಿ ಆಡಬೇಕು’ ಅಂತ ಎಷ್ಟೋ ಯುವಕರು ಕನಸು ಕಾಣುತ್ತಿರುತ್ತಾರೆ. ಇದೇ ರೀತಿಯ ಕನಸನ್ನು ನನಸಾಗಿಸಿಕೊಂಡು, ಈಗ ವಿಶ್ವದ ಶ್ರೇಷ್ಠ ಕಬಡ್ಡಿ ಲೀಗ್‌ನಲ್ಲಿ ತಾರಾ ರೈಡರ್ ಆಗಿದ್ದಾರೆ ಭರತ್ ಹೂಡಾ.

10ನೇ ಆವೃತ್ತಿಯ ಪುಣೆ ಚರಣದ ವೇಳೆ ಭರತ್, ‘ಕನ್ನಡಪ್ರಭ’ದೊಂದಿಗೆ ತಮ್ಮ ಕಬಡ್ಡಿ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದರು. ಹರ್ಯಾಣದ ರೋಹ್ಟಕ್‌ನ ಮಣ್ಣಿನ ಅಂಕಣ ಗಳಲ್ಲಿ ಟೈಂ ಪಾಸ್‌ಗೆ ಕಬಡ್ಡಿ ಆಡುತ್ತಿದ್ದ ಭರತ್, ಟೀವಿಯಲ್ಲಿ ಪ್ರೊ ಕಬಡ್ಡಿ ನೋಡಿದ ಮೇಲೆ ತಾವೂ ಮುಂದೆ ಈ ಲೀಗಲ್ಲಿ ಆಡಬೇಕು ಎಂದು ನಿರ್ಧರಿಸಿ, ಆಟವನ್ನು ಗಂಭೀರವಾಗಿ ಪರಿಗಣಿಸಿದರಂತೆ.

‘ನಾನು ಶಾಲೆಗೆ ಹೋಗುತ್ತಿದ್ದ ದಿನಗಳವು. 2014ರಲ್ಲಿ ಪ್ರೊ ಕಬಡ್ಡಿ ಆರಂಭಗೊಂಡಾಗ ಮೊದಲ ಬಾರಿಗೆ ಟೀವಿಯಲ್ಲಿ ಆಟವನ್ನು ನೋಡಿದಾಗ ಬಹಳ ಥ್ರಿಲ್ ಆಗಿತ್ತು. ಕಬಡ್ಡಿ ಇಷ್ಟು ದೊಡ್ಡದಾಗಿ ಬೆಳೆಯಬಹುದು ಎನ್ನುವ ಊಹೆಯೂ ನನಗಿರಲಿಲ್ಲ. ಮೊದಲ ಸಲ ನೋಡಿದಾಗಲೇ ನಾನೂ ಒಂದು ದಿನ ಟೀವಿಯಲ್ಲಿ ಬರುವಷ್ಟು ಜನಪ್ರಿಯ ಆಟಗಾರಬೇಕು ಅಂದುಕೊಂಡೆ. ನನ್ನ ಕನಸು ನನಸಾಗಿದೆ’ ಎಂದು ಭರತ್ ಖುಷಿಯಿಂದ ಹೇಳಿಕೊಂಡರು. ಶಾಲಾ ದಿನಗಳಲ್ಲಿ ಕ್ರಿಕೆಟ್‌ನತ್ತ ಹೊರಳಿದ್ದ ಭರತ್ ರನ್ನು ಅವರ ದೈಹಿಕ ಶಿಕ್ಷಕ ಕಬಡ್ಡಿಗೆ ಕರೆತಂದರಂತೆ. ಬಹಳ ಬೇಗ ಕಬಡ್ಡಿ ಆಟಕ್ಕೆ ಮನಸೋತ ಭರತ್‌ಗೆ, ಸ್ಥಳೀಯ ತಂಡಗಳ ಪರ ಆಡಲು ಹೆಚ್ಚು ಸಮಯಬೇಕಾಗಲಿಲ್ಲ.

ಕೆ ಎಲ್ ರಾಹುಲ್‌ಗೆ ‘ಬಾಕ್ಸಿಂಗ್ ಡೇ ಟೆಸ್ಟ್’ ಅಂದ್ರೆ ತುಂಬಾ ಸ್ಪೆಷಲ್..!

ಪ್ರೊ ಕಬಡ್ಡಿ ಆಯೋಜಕರು ನಡೆಸುವ ನ್ಯೂ ಯಂಗ್ ಪ್ಲೇಯರ್(ಎನ್‌ವೈಪಿ) ಯೋಜನೆ ಭರತ್ ಪಾಲಿಗೆ ವರದಾನವಾಯಿತು. ದೇಶಾದ್ಯಂತ ಯುವ ಪ್ರತಿಭೆಗಳನ್ನು ಹುಡುಕಿ ತರಬೇತಿ ಶಿಬಿರಕ್ಕೆ ಕರೆತಂದು, ಅವರ ಆಟ ಫ್ರಾಂಚೈಸಿಗಳ ಕಣ್ಣಿಗೆ ಬೀಳುವಂತೆ ಮಾಡುವುದು ಎನ್‌ವೈಪಿ ಯೋಜನೆಯ ಮುಖ್ಯ ಉದ್ದೇಶ. ಭರತ್‌ರ ಪ್ರತಿಭೆಯನ್ನು ಗುರುತಿಸಿದ ಬೆಂಗಳೂರು ಬುಲ್‌ಸ್ ಫ್ರಾಂಚೈಸಿ, 8ನೇ ಆವೃತ್ತಿಯಲ್ಲಿ ಈತನನ್ನು ಮೊದಲ ಬಾರಿಗೆ ಲೀಗ್‌ಗೆ ಪರಿಚಯಿಸಿತು.

ತಾವಾಡಿದ ಮೊದಲ ಆವೃತ್ತಿಯಲ್ಲೇ 129 ಅಂಕಗಳನ್ನು ಪಡೆದ ಭರತ್, 2022ರಲ್ಲಿ 282 ಅಂಕ ಪಡೆದು ಆ ಆವೃತ್ತಿಯ ಅತ್ಯುತ್ತಮ ರೈಡರ್ ಗೌರವಕ್ಕೆ ಪಾತ್ರರಾದರು. 2023ರಲ್ಲಿ ಸ್ವಲ್ಪ ಮಂಕಾದಂತೆ ಕಂಡರೂ, ಭರತ್ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭರತ್ ಅವರಂತೆಯೇ ಸಾವಿರಾರು ಯುವ ಪ್ರತಿಭೆಗಳು ಪ್ರೊ ಕಬಡ್ಡಿಯಲ್ಲಿ ಆಡುವ ಕನಸು ಕಾಣುತ್ತಿರುತ್ತಾರೆ. ಅರ್ಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ಸಿಗಲಿ ಎನ್ನುವುದೇ ಅಭಿಮಾನಿಗಳ ಆಶಯ

ಪ್ರೊ ಕಬಡ್ಡಿಯನ್ನು ಮೊದಲ ಸಲ ನೋಡಿದಾಗ ಬಹಳ ಉತ್ಸುಕಗೊಂಡಿದ್ದೆ. ಬಹಳ ಉತ್ಸಾಹ, ಬದ್ಧತೆಯೊಂದಿಗೆ ಆಟವನ್ನು ಕಲಿತು ಲೀಗ್‌ನಲ್ಲಿ ಆಡುವ ಅವಕಾಶ ಪಡೆದೆ. ನನ್ನ ಆಟವನ್ನು ಉತ್ತಮಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಲೀಗ್‌ನ ಸಾರ್ವಕಾಲಿಕ ಶ್ರೇಷ್ಠ ರೈಡರ್‌ಗಳಲ್ಲಿ ನಾನೂ ಒಬ್ಬನಾಗಬೇಕು ಎನ್ನುವುದೇ ನನ್ನ ಗುರಿ - ಭರತ್ ಹೂಡಾ ಬುಲ್ಸ್ ರೈಡರ್

ಭರತ್ ಒಬ್ಬ ಚಾಣಾಕ್ಷ ರೈಡರ್. ಗುಣಮಟ್ಟದ ರೈಡರ್‌ಗೆ ಬೇಕಿರುವ ಎಲ್ಲಾ ಕೌಶಲ್ಯಗಳು ಅವರಲ್ಲಿವೆ. ಅವರೊಬ್ಬ ಶ್ರೇಷ್ಠ ರೈಡರ್ ಆಗಿ ಬೆಳೆಯಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ - ಸೌರಭ್ ನಂದಲ್ ಬೆಂಗಳೂರು ಬುಲ್ಸ್‌ ನಾಯಕ

Latest Videos
Follow Us:
Download App:
  • android
  • ios