Asianet Suvarna News Asianet Suvarna News

ಪ್ರೊ ಕಬಡ್ಡಿ 2018: ಯುಪಿ ಯೋಧ - ಬೆಂಗಾಲ್ ಪಂದ್ಯ ರೋಚಕ ಡ್ರಾ!

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Pro kabaddi Bengal Warriors play out an exciting 40-40 tie with UP Yoddha
Author
Bengaluru, First Published Oct 20, 2018, 9:36 PM IST
  • Facebook
  • Twitter
  • Whatsapp

ಸೋನೆಪತ್(ಅ.20): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 25ನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಯುಪಿ ಯೋಧ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ 40-40 ಅಂಕಗಳ ಅಂತರದಲ್ಲಿ ಡ್ರಾ ಗೊಂಡಿದೆ.

 

 

ಎರಡೂ ತಂಡಗಳು ಗೆಲುವಿಗೆ ಜಿದ್ದಾ ಜಿದ್ದಿನ ಹೋರಾಟ ನಡೆಸಿತ್ತು. ಆರಂಭದಲ್ಲೇ ಬೆಂಗಾಲ್ ವಾರಿಯರ್ಸ್ 2 ಅಂಕ ಪಡೆಯೋ ಮೂಲಕ ಖಾತೆ ಆರಂಭಿಸಿತು. ಆದರೆ ಮೊದಲಾರ್ಧದ ಅಂತ್ಯದಲ್ಲಿ ಯುಪಿ ಯೋಧಾ 18-15 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿತು.ಟ

ಮೊದಲಾರ್ಧದಲ್ಲಿ ಮುನ್ನಡೆ ಪಡೆದ ಯುಪಿ ಯೋಧ ದ್ವಿತೀಯಾರ್ಧದಲ್ಲೂ ಮುನ್ನಡೆ ಸಾಧಿಸಿತು. ಆದರೆ ಪಂದ್ಯದ ಅಂತಿಮ ಘಟ್ಟದಲ್ಲಿ ಬೆಂಗಾಲ್ ವಾರಿಯರ್ಸ್ ತಿರುಗೇಟು ನೀಡಿತು. ಈ ಮೂಲಕ ಸಮಬಲಗೊಳಿಸಿತು. 
 

Follow Us:
Download App:
  • android
  • ios