Asianet Suvarna News Asianet Suvarna News

PKL7: ಹರ್ಯಾಣ ಸ್ಟೀಲರ್ಸ್ ಆಟಕ್ಕೆ ಪುಣೇರಿ ಪಲ್ಟಾನ್ ಪಲ್ಟಿ!

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹರ್ಯಾಣ ಸ್ಟೀಲರ್ಸ್ ಅದ್ಭುತ ಆಟಕ್ಕೆ ಪುಣೇರಿ ಪಲ್ಟಾನ್ ಸೋಲಿಗೆ ಶರಣಾಗಿದೆ. ರೋಚಕ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.

Pro kabaddi 2019 Haryana Steelers Beat Puneri Paltan at hyderabad
Author
Bengaluru, First Published Jul 22, 2019, 9:41 PM IST
  • Facebook
  • Twitter
  • Whatsapp

ಹೈದರಾಬಾದ್(ಜು.22): ಪುಣೇರಿ ಪಲ್ಟಾನ್ ಹಾಗೂ ಹರಿಯಾಣ ಸ್ಟೀಲರ್ ನಡುವಿನ ಪ್ರೋ ಕಬಡ್ಡಿ ಲೀಗ್ ಪಂದ್ಯ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದೆ. ರೋಚಕ ಹೋರಾಟದಲ್ಲಿ ಹರಿಯಾಣ ಸ್ಟೀಲರ್ 34-24 ಅಂಕಗಳ ಅಂತರದಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಮಣಿಸಿದೆ. ಈ ಮೂಲಕ 7ನೇ ಆವೃತ್ತಿ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲಾರ್ಧದಲ್ಲಿ ಮೊದಲು ಅಂಕ ಖಾತೆ ತೆರೆದ ಪುಣೇರಿ ಪಲ್ಟಾನ್, 7 ನಿಮಿಷದ ವರೆಗೆ ಮುನ್ನಡೆ  ಕಾಯ್ದುಕೊಂಡಿತ್ತು. ಆದರೆ ಅಷ್ಟೇ ವೇಗದಲ್ಲಿ ಹರ್ಯಾಣ ಸ್ಟೀಲರ್ ಮುನ್ನಡೆ ಪಡೆಯಿತು. ಹೀಗಾಗಿ ಮೊದಲಾರ್ಧದಲ್ಲಿ ಹರ್ಯಾಣ 22-10 ಅಂಕಗಳ ಮುನ್ನಡೆ ಪಡೆಯಿತು.

ದ್ವಿತಿಯಾರ್ಧದಲ್ಲೂ ಹರ್ಯಾಣ ಮುನ್ನಡೆ ಕಾಯ್ದುಕೊಂಡಿತು. ಇತ್ತ ಪುಣೇರಿ ಅಂಕ ಗಳಿಗೆ ಮುನ್ನಡೆ ತಂದುಕೊಡಲಿಲ್ಲ. ಅಂತಿಮ ಹಂತದಲ್ಲಿ ಹರ್ಯಾಣ ಸ್ಟೀಲರ್ 34-24 ಅಂತರದಲ್ಲಿ ಗೆಲುವು ಸಾಧಿಸಿತು. 

Follow Us:
Download App:
  • android
  • ios