PKL7: ತಮಿಳ್ ತಲೈವಾಸ್‌ ವಿರುದ್ದವೂ ದಬಾಂಗ್ ದಿಲ್ಲಿಗೆ ರೋಚಕ ಗೆಲುವು!

ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ದಬಾಂಗ್ ದಿಲ್ಲಿ, 2ನೇ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸಿದೆ. ಅಂತಿಮ ಕ್ಷಣದಲ್ಲಿ ತಮಿಳ್ ತಂಡಕ್ಕೆ ತಿರುಗೇಟು ನೀಡಿದ ದಿಲ್ಲಿ ಗೆಲುವು ಸಾಧಿಸಿದೆ. 

Pro kabaddi 2019 Dabang Delhi KC Beat Tamil Thalaivas at hyderabad

ಹೈದರಾಬಾದ್(ಜು.25): ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಗೆಲುವಿನ ಮೂಲಕ 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ ದಬಾಂಗ್ ದಿಲ್ಲಿ, ಗೆಲುವಿನ ನಾಗಾಲೋಟ ಮುಂದುವರಿಸಿದೆ. ಆರಂಭಿಕ ಹಂತದಲ್ಲಿ ಮುನ್ನಡೆಯಲ್ಲಿ ತಮಿಳ್ ತಲೈವಾಸ್‌ಗೆ, ಅಂತಿಮ ಕ್ಷಣದಲ್ಲಿ ತಿರುಗೇಟು ನೀಡಿದ ದಬಾಂಗ್ ದಿಲ್ಲಿ ಗೆಲುವಿನ ಕೇಕೆ ಹಾಕಿತು. ತಮಿಳ್ ತಲೈವಾಸ್ ವಿರುದ್ಧದ ಹೋರಾಟದಲ್ಲಿ ದಿಲ್ಲಿ  30-29  ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. 

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !

7ನೇ ಆವೃತ್ತಿಯಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಿರುವ ತಮಿಳ್ ತಲೈವಾಸ್ ನಿರೀಕ್ಷಿತ ಆರಂಭ ಪಡೆಯಿತು. ಮೊದಲಾರ್ಧದ ಆರಂಭದಲ್ಲಿ ಅಜಯ್ ಠಾಕೂರ್ ಅಂಕ ಗಳಿಸೋ ಮೂಲಕ ತಮಿಳ್ ತಲೈವಾಸ್ ಅಕೌಂಟ್ ಓಪನ್ ಮಾಡಿತು. ಠಾಕೂರ್ ಜೊತೆಗೆ ರಾಹುಲ್ ಚೌಧರಿ ಕೂಡ ದಬಾಂಗ್ ದಿಲ್ಲಿಗೆ ಆಘಾತ ನೀಡಿದರು. ಫಸ್ಟ್ ಹಾಫ್ ಅಂತ್ಯದಲ್ಲಿ ತಮಿಳ್ ತಲೈವಾಸ್ 18-11 ಅಂತರದ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ:  ಪ್ರೊ ಕಬಡ್ಡಿ 7ನೇ ಆವೃತ್ತಿ ವಿಶೇಷತೆ!

ದ್ವಿತಿಯಾರ್ಧದಲ್ಲೂ ತಮಿಳ್ ತಲೈವಾಸ್ ಆರ್ಭಟಿಸಿತು. 16 ನಿಮಿಷದವರೆಗೂ ತಮಿಳ್ ತಲೈವಾಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಪಂದ್ಯ ಮುಕ್ತಾಯಕ್ಕೆ ಇನ್ನೇನು 3 ನಿಮಿಷ ಬಾಕಿ ಇರುವಾಗ ದಬಾಂಗ್ ದಿಲ್ಲಿ ತಿರುಗೇಟು ನೀಡಿತು. 29-29 ಅಂಕಗಳ ಮೂಲಕ ಸಮಬಲ ಮಾಡಿತು. ನಂತರದ 3 ರೈಡ್‌ಗಳಲ್ಲಿ ಉಭಯ ತಂಡ ಅಂಕ ಗಳಿಸಲಿಲ್ಲ. ಆದರೆ ಅಂತಿಮ 30  ಸೆಕೆಂಡ್ ಅವದಿಯಲ್ಲಿ ನವೀನ್ ಕುಮಾರ್ ರೈಡ್ ಅಂಕದ ಮೂಲಕ ದಬಾಂಗ್ ದಿಲ್ಲಿ 30-29 ಅಂಕಗಳ ಮೂಲಕ ರೋಚಕ ಗೆಲುವು ಸಾಧಿಸಿತು. 

ಪ್ರೊ ಕಬಡ್ಡಿ:

ವೃತ್ತಿಪರ ಕಬಡ್ಡಿ ಪಟುಗಳ ಲೀಗ್ ಟೂರ್ನಿಯಾಗಿರುವ ಪ್ರೊ ಕಬಡ್ಡಿ 6 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ 7ನೇ ಆವೃತ್ತಿಗೆ ಕಾಲಿಟ್ಟಿದೆ. ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳು ಲೀಗ್ ಟೂರ್ನಿಗಳಾಗಿ ಪ್ರಖ್ಯಾತಿ ಪಡೆದಿದೆ. ಆದರೆ 2014ರ ವರೆಗೆ ಕಬಡ್ಡಿ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಸೇರಿದಂತೆ  ಕ್ರೀಡಾಕೂಟಗಳಿಗೆ ಸೀಮಿತವಾಗಿತ್ತು. ಆದರೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಗೊಂಡಿತು.  ಇದೀಗ ಭಾರತದಲ್ಲಿ ಐಪಿಎಲ್ ರೀತಿಯಲ್ಲೇ ಪ್ರೊ ಕಬಡ್ಡಿ ಕೂಡ ಜನಪ್ರಿಯವಾಗಿದೆ. 

8 ತಂಡಗಳೊಂದಿಗೆ ಆರಂಭಗೊಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸದ್ಯ 12 ತಂಡಗಳು ಕಣದಲ್ಲಿವೆ. 6ನೇ ಆವೃತ್ತಿಯಲ್ಲಿ(2018) ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲ ಬಾರಿಗೆ ಬೆಂಗಳೂರು ಈ ಸಾಧನೆ ಮಾಡಿತು. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ 3 ಬಾರಿ ಪ್ರಶಸ್ತಿ ಗೆದ್ದುಕೊಂಡು, ಗರಿಷ್ಠ ಟ್ರೋಫಿ ಗೆದ್ದ ಸಾಧನೆ ಮಾಡಿದೆ. 

Latest Videos
Follow Us:
Download App:
  • android
  • ios