ಪಾಟಲೀಪುತ್ರ(ಆ.05): ದಬಾಂಗ್ ದಿಲ್ಲಿ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಹೋರಾಟ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಕಾರಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾ ಜಿದ್ದಿನ ಹೋರಾಟ ನೀಡುತ್ತಿದೆ. ಆದರೆ ದಬಾಂಗ್ ವಿರುದ್ಧ ಜೈಪುರ ನಿರೀಕ್ಷೀತ  ಪ್ರದರ್ಶನ ನೀಡಲಿಲ್ಲ. ಹೀಗಾಗಿ ದಬಾಂಗ್ ದಿಲ್ಲಿ 35-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !

ಉತ್ತಮ ಆರಂಭ ಪಡೆದ ಜೈಪುರ ಪಿಂಕ್ ಪ್ಯಾಂಥರ್ಸ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. 13ನೇ ನಿಮಿಷದ ವರೆಗೆ ಜೈಪುರ ತಂಡ 9-8 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಆದರೆ 14ನೇ ನಿಮಿಷದಲ್ಲಿ ದಿಲ್ಲಿ 9-9 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಬಳಿಕ ಜೈಪುರ ತಂಡವನ್ನು ಹಿಂದಿಕ್ಕಿ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಅಂತ್ಯದ ವೇಳೆಗೆ ದಿಲ್ಲಿ 16-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ದ್ವಿತಿಯಾರ್ಧದಲ್ಲಿ ದೀಪಕ್ ಹೂಡ ಸೂಪರ್ ರೈಡ್ ಮೂಲಕ ಜೈಪುರ ಮುನ್ನಡೆಗಾಗಿ ಕಠಿಣ ಪ್ರಯತ್ನ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. ಜೈಪುರ 19 ಅಂಕಗಳಿಸಿ ತಣ್ಣಗಾಯಿತು. ಆದರೆ ದಿಲ್ಲಿ ಭರ್ಜರಿ ಅಂಕಬೇಟೆ ನಡೆಸಿತು. ಹೀಗಾಗಿ 35-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 5 ಪಂದ್ಯದಲ್ಲಿ 4 ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನ ಅಲಂಕರಿಸಿತು.