Asianet Suvarna News Asianet Suvarna News

PKL7: ಬೆಂಗಳೂರು ಬುಲ್ಸ್ ನೆಗೆತಕ್ಕೆ ಅಪ್ಪಚ್ಚಿಯಾದ ತಮಿಳ್ ತಲೈವಾಸ್!

ಕಳೆದ ಆವೃತ್ತಿಯಲ್ಲಿ ಘರ್ಜಿಸಿ ಪ್ರಶಶ್ತಿ ಗೆದ್ದುಕೊಂಡಿದ್ದ ಬೆಂಗಳೂರು ಬುಲ್ಸ್ ಈ ಬಾರಿಯೂ ಚಾಂಪಿಯನ್ ಆಟವಾಡುತ್ತಿದೆ. ಇದೀಗ ತಮಿಲ್ ತಲೈವಾಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 

Pro kabaddi 2019 Bengaluru Bulls Beat Tamil Thalaivas by 32-21 points at chennai
Author
Bengaluru, First Published Aug 17, 2019, 9:10 PM IST
  • Facebook
  • Twitter
  • Whatsapp

ಚೆನ್ನೈ(ಆ.17): ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ಘರ್ಜಿಸಿದೆ. ಸಾಂಪ್ರದಾಯಿಕ ಎದುರಾಳಿ ತಮಿಲ್ ತಲೈವಾಸ್ ವಿರುದ್ಧದ ಹೋರಾಟದಲ್ಲಿ ಬೆಂಗಳೂರು 32-21 ಅಂಕಗಳ ಮೂಲಕ  ಭರ್ಜರಿ ಗೆಲುವು ಸಾಧಿಸಿತು. ತಮಿಳು ಆಕ್ರಮಣಕಾರಿ ಆಟಕ್ಕೆ ಬ್ರೇಕ್ ಹಾಕಿದ ಬೆಂಗಳೂರು ದಿಟ್ಟ ತಿರುಗೇಟು ನೀಡಿತು. ಇದರೊಂದಿಗೆ ಹಾಲಿ ಚಾಂಪಿಯನ್ ಬೆಂಗಳೂರು ಈ ಬಾರಿಯೂ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಫಸ್ಟ್ ಹಾಫ್ ಆರಂಭದಲ್ಲೇ ಬೆಂಗಳೂರು ಅಬ್ಬರಿಸಿತು. ಆರಂಭಿಕಕ 5 ನಿಮಷದಲ್ಲಿ ಬೆಂಗಳೂರು ಅಂಕ ಬಾಚಿಕೊಂಡರೆ, ಇತ್ತ ತಮಿಳ್ ತಲೈವಾಸ್ ಒಂದು ಅಂಕವನ್ನೂ ಗಳಿಸಲಿಲ್ಲ. 7-0 ಮುನ್ನಡೆ ಸಾಧಿಸಿದ ಬೆಂಗಳೂರು 6ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಆಲೌಟ್ ಮಾಡಿತು. ಈ ಮೂಲಕ 10-1 ಅಂಕಗಳ ಮುನ್ನಡೆ ಪಡೆದುಕೊಂಡಿತು.  ಮೊದಲಾರ್ಧದ ಅಂತ್ಯದ ವೇಳೆ ತಮಿಳ್ ತಲೈವಾಸ್ ಚುರುಕಿನ ಆಟವಾಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಅಷ್ಟರಲ್ಲೇ ಬೆಂಗಳೂರು ಭಾರಿ ಮುನ್ನಡೆ ಪಡೆದುಕೊಂಡಿತ್ತು. ಹೀಗಾಗಿ ಬುಲ್ಸ್ 17-10 ಅಂಕದೊಂದಿಗೆ ಮೊದಲಾರ್ಧ ಅಂತ್ಯಗೊಳಿಸಿತು. ಇನ್ನು ಸೆಕೆಂಡ್ ಹಾಫ್‌ನಲ್ಲಿ ಬೆಂಗಳೂರು ಹೋರಾಟ ಮುಂದುವರಿಸಿತು. ಇತ್ತ ತಮಿಲ್ ತಲೈವಾಸ್ ಮುನ್ನಡೆಗಾಗಿ ಪ್ರಯತ್ನ ಮಾಡಿದರೂ ಯಾವುದೂ ಕೈಗೂಡಲಿಲ್ಲ. ಪಂದ್ಯ ಮುಕ್ತಾಯದ ವೇಳೆ ಬೆಂಗಳೂರುು 32-21 ಅಂಕಗಳಿಂದ ಮುನ್ನಡೆ ಸಾಧಿಸಿತು.

Follow Us:
Download App:
  • android
  • ios