ಪಾಟಲೀಪುತ್ರ(ಆ.03): ಪ್ರೊ ಕಬಡ್ಡಿ 7ನೇ ಆವೃತ್ತಿ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಗೆಲವಿನ ಹಳಿಗೆ ಮರಳಿದೆ. ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ದ ಮುಗ್ಗರಿಸಿದ್ದ ಬುಲ್ಸ್, ಇದೀಗ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕಗಳ ರೋಚಕ ಗೆಲುವು ಸಾಧಿಸಿದೆ. ಅಂತಿಮ ಸೆಕೆಂಡ್ ವರೆಗೂ  ಗೆಲುವು ಯಾರಿಗೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಬೆಂಗಳೂರು ಬುಲ್ಸ್ 43-42 ಅಂಕಗಳ ಅಂತರಗಲ್ಲಿ ಗೆಲುವು ಸಾಧಿಸಿತು. 

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !

ಪಂದ್ಯದ ಆರಂಭದಲ್ಲೇ ಬೆಂಗಳೂರು 1 ಅಂಕ ಎದುರಾಳಿಗೆ ಬಿಟ್ಟುಕೊಟ್ಟಿತು. ಆರಂಭಿಕ 2 ನಿಮಿಷದವರೆಗೆ ಬೆಂಗಳೂರು ಅಂಕಗಳಿಸಲು ವಿಫಲವಾಯಿತು. 4 ನಿಮಿಷದವರೆಗೆ ಹಿನ್ನಡೆಯಲ್ಲಿದ್ದ ಬುಲ್ಸ್, 5ನೇ ನಿಮಿಷದಲ್ಲಿ 3-3 ಅಂಕಗಳ ಮೂಲಕ ಸ್ಕೋರ್ ಸಮಬಲಗೊಳಿಸಿತು. ಆಕ್ರಮಣಕಾರಿ ಆಟವಾಡಿದ ಪಾಟ್ನಾ ಅಷ್ಟೇ ವೇಗದಲ್ಲಿ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದಲ್ಲಿ ಪಾಟ್ನಾ ಅಬ್ಬರಿಸಿತು. ಹೀಗಾಗಿ 21-18 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ದ್ವಿತಿಯಾರ್ಧದಲ್ಲೂ ಪಾಟ್ನಾ ಮುನ್ನಡೆಯೊಂದಿಗೆ ಹೆಜ್ಜೆ ಇಟ್ಟಿತು. ಬೆಂಗಳೂರು ಬುಲ್ಸ್ ಕಠಿಣ ಹೋರಾಟ ನೀಡಿದರೂ ಪಾಟ್ನಾ ಬಿಗಿ ಪಟ್ಟು ಸಡಿಲಿಸಲಿಲ್ಲ. ದ್ವಿತಿಯಾರ್ಧದ 16 ನಿಮಿಷದವರೆಗೆ ಪಾಟ್ನಾ ಮುನ್ನಡೆಯಲ್ಲಿತ್ತು. ಅಂತಿಮ ಹಂತದಲ್ಲಿ ಗೇರ್ ಬದಲಾಯಿಸಿದ ಬೆಂಗಳೂರು ಬುಲ್ಸ್, 40-40 ಅಂಕಗಳಿಂದ ಸಮಬಲ ಮಾಡಿಕೊಂಡಿತು. ಬಳಿಕ  ಅಂತರ ಹೆಚ್ಚಿಲದಿದ್ದರೂ ಬೆಂಗಳೂರು ಗೆಲುವಿನತ್ತ ಹೆಜ್ಜೆ ಇಟ್ಟಿತು. ಅಂತಿಮ ಕ್ಷಣದಲ್ಲಿ 43-42 ಅಂಕಗಳ ಅಂತರದಲ್ಲಿ ಬೆಂಗಳೂರು ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇ ಜಿಗಿದಿದೆ.