Asianet Suvarna News Asianet Suvarna News

ಪ್ರೊ ಕಬಡ್ಡಿ: ತಲೈವಾಸ್’ಗೆ ಸೋಲುಣಿಸಿದ ಯೋಧಾ

ಇಲ್ಲಿನ ಜವಾಹರ್ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದ ಆರಂಭದಲ್ಲಿ ಯೋಧಾ ಪಡೆ ಪಡೆ ಆಕ್ರಮಣಕಾರಿಯಟವಾಡಿತು. ಪಂದ್ಯದ 8ನೇ ನಿಮಿಷದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಯೋಧಾ ಪಡೆ 10-0 ಅಂಕಗಳ ಮುನ್ನಡೆ ಸಾಧಿಸಿತು.

Pro Kabaddi 2018 UP Yoddha beat Tamil Thalaivas 37- 32
Author
Chennai, First Published Oct 8, 2018, 11:00 PM IST

ಚೆನ್ನೈ[ಅ.08]: ನಾಯಕ ಅಜಯ್ ಠಾಕೂರ್ ಏಕಾಂಗಿ ಹೋರಾಟದ ಹೊರತಾಗಿಯೂ ಯುಪಿ ಯೋಧಾದ ಸಂಘಟಿತ ಪ್ರದರ್ಶನದೆದುರು ತಮಿಳ್ ತಲೈವಾಸ್ 37-32 ಅಂಕಗಳ ರೋಚಕ ಸೋಲು ಕಂಡಿತು.

ಇಲ್ಲಿನ ಜವಾಹರ್ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದ ಆರಂಭದಲ್ಲಿ ಯೋಧಾ ಪಡೆ ಪಡೆ ಆಕ್ರಮಣಕಾರಿಯಟವಾಡಿತು. ಪಂದ್ಯದ 8ನೇ ನಿಮಿಷದಲ್ಲಿ ತಲೈವಾಸ್ ತಂಡವನ್ನು ಆಲೌಟ್ ಮಾಡಿದ ಯೋಧಾ ಪಡೆ 10-0 ಅಂಕಗಳ ಮುನ್ನಡೆ ಸಾಧಿಸಿತು. ಪಂದ್ಯದ 12ನೇ ನಿಮಿಷದಲ್ಲಿ ಪ್ರಶಾಂತ್ ಕುಮಾರ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ತಲೈವಾಸ್ ಮೊದಲ ಅಂಕ ಸಂಪಾದಿಸಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಯೋಧಾ ಪಡೆ 18-4 ಅಂಕಗಳ ಮುನ್ನಡೆ ಸಾಧಿಸಿತ್ತು.

ಇನ್ನು ದ್ವಿತಿಯಾರ್ಧದಲ್ಲಿ ಅಜಯ್ ಠಾಕೂರ್ ಮಿಂಚಿನ ಪ್ರದರ್ಶನ ತೋರುವ ಮೂಲಕ ಅಂತರವನ್ನು ತಗ್ಗಿಸುತ್ತಾ ಬಂದರು. ಮೊದಲಾರ್ಧದಲ್ಲಿ 14 ಅಂಕಗಳ ಹಿನ್ನಡೆಯಲ್ಲಿದ್ದ ತಲೈವಾಸ್ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಭರ್ಜರಿಯಾಗಿಯೇ ಕಮ್’ಬ್ಯಾಕ್ ಮಾಡಿತು. ಕೊನೆಯ ಒಂದು ನಿಮಿಷವಿದ್ದಾಗ ತಲೈವಾಸ್ 31-33 ಅಂಕಗಳ ಅಲ್ಪ ಹಿನ್ನಡೆಯಲ್ಲಿತ್ತು. ಈ ವೇಳೆ ಎಚ್ಚರಿಕೆಯ ಆಟವಾಡಿದ ಯೋಧಾ ಪಡೆ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

ಯುಪಿ ಗೆಲುವಿನಲ್ಲಿ ರೈಡಿಂಗ್’ನಲ್ಲಿ ಪ್ರಶಾಂತ್ ರೈ 8 ಅಂಕ ಪಡೆದರೆ, ನರೇಂದರ್ 4 ಅಂಕ ಸಂಪಾದಿಸಿದರು. ಇನ್ನು ತಲೈವಾಸ್ ಪರ ಅಜಯ್ ಠಾಕೂರ್ 12 ಅಂಕ ಕಲೆಹಾಕಿದರೆ, ಮಂಜೀತ್ ಚಿಲ್ಲಾರ್ ಟ್ಯಾಕಲ್’ನಲ್ಲಿ 4 ಅಂಕ ಪಡೆದರು. 

Follow Us:
Download App:
  • android
  • ios