ತಾವು ಉಳಿದುಕೊಂಡಿದ್ದ ತಾಜ್ ಹೋಟೆಲ್‌ನಿಂದ 16 ಕಿ.ಮೀ. ದೂರದಲ್ಲಿರುವ ಕ್ರೀಡಾಂಗಣದತ್ತ ಆಟಗಾರರು ಮಂಗಳವಾರ ಮಧ್ಯಾಹ್ನ ೪ರ ವೇಳೆಗೆ ಹೊರಟಿದ್ದರು. ಆದರೆ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಕಾರಣ, ನಿಗದಿತ ಅವಧಿಯೊಳಗೆ ಆಟಗಾರರು ಕ್ರೀಡಾಂಗಣ ತಲುಪಲು ಸಾಧ್ಯವಾಗದ ಕಾರಣ ಪ್ರೊ ಕಬಡ್ಡಿ ಪಂದ್ಯಗಳನ್ನು ಮುಂದೂಡಲಾಯಿತು.
ಮುಂಬೈ(ಆ.31): ಮಂಗಳವಾರ ಸುರಿದ ಮಹಾಮಳೆಯಿಂದಾಗಿ ಅತ್ತ ಕ್ರೀಡಾಂಗಣ ತಲುಪಲು ಸಾಧ್ಯವಾಗದ ಬೆಂಗಳೂರು ಬುಲ್ಸ್ ಆಟಗಾರರು ಬಳಿಕ ಎರಡುವರೆ ತಾಸು ಮಳೆಯಲ್ಲಿಯೇ 12 ಕಿ.ಮೀ. ನಡೆದುಕೊಂಡು ಸಾಗಿ, ಮಧ್ಯರಾತ್ರಿ 2 ಗಂಟೆಗೆ ಹೋಟೆಲ್ ತಲುಪಿರುವ ಸುದ್ದಿ ಬೆಳಕಿಗೆ ಬಂದಿದೆ.
ತಾವು ಉಳಿದುಕೊಂಡಿದ್ದ ತಾಜ್ ಹೋಟೆಲ್ನಿಂದ 16 ಕಿ.ಮೀ. ದೂರದಲ್ಲಿರುವ ಕ್ರೀಡಾಂಗಣದತ್ತ ಆಟಗಾರರು ಮಂಗಳವಾರ ಮಧ್ಯಾಹ್ನ ೪ರ ವೇಳೆಗೆ ಹೊರಟಿದ್ದರು. ಆದರೆ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡ ಕಾರಣ, ನಿಗದಿತ ಅವಧಿಯೊಳಗೆ ಆಟಗಾರರು ಕ್ರೀಡಾಂಗಣ ತಲುಪಲು ಸಾಧ್ಯವಾಗದ ಕಾರಣ ಪ್ರೊ ಕಬಡ್ಡಿ ಪಂದ್ಯಗಳನ್ನು ಮುಂದೂಡಲಾಯಿತು.
ಈ ಹಿನ್ನೆಲೆಯಲ್ಲಿ ಬುಲ್ಸ್ ಆಟಗಾರರು ಹೋಟೆಲ್ಗೆ ಮರಳಲು ನಿರ್ಧರಿಸಿದರು. ಆದರೆ, ತಂಡ ತೆರಳುತ್ತಿದ್ದ ಬಸ್ ಬಿಕೆಸಿ (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್)ಯಿಂದ ಮುಂದೆ ಹೋಗಲಿಲ್ಲ. ಅಲ್ಲಿಂದ 12 ಕಿ.ಮೀ. ದೂರದ ಸಾಂತ ಕ್ರೂಜ್ನಲ್ಲಿರುವ ತಾಜ್ ಹೋಟೆಲ್ಗೆ ಆಟಗಾರರು ಪಾದಯಾತ್ರೆ ನಡೆಸಿದ್ದಾರೆ. ಈ ಬಗ್ಗೆ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಂಡದ ಆಟಗಾರರು ಕೋಚ್ ರಣಧೀರ್ ಸಿಂಗ್ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಬುಧವಾರ ಅಪ್ಲೋಡ್ ಮಾಡಲಾಗಿದೆ. ರದ್ದಾದ ಪಂದ್ಯಗಳು ನಡೆಯುವ ಕುರಿತು ಇನ್ನೂ ತೀರ್ಮಾನಗೊಂಡಿಲ್ಲ ಎಂದು ಮೂಲಗಳು ತಿಳಿಸಿದೆ.
