ಮುಂಬೈ ತಂಡದ ಪರ ದಾಖಲಾದ 2ನೇ ವೇಗದ ಅರ್ಧಶತಕ ಇದಾಗಿದೆ.

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ರಣಜಿ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಮುಂಬೈನ 18 ವರ್ಷದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ವೇಗದ ಅರ್ಧಶತಕ ದಾಖಲಿಸಿದ್ದಾರೆ. ಮುಂಬೈ ತಂಡದ ಪರ ದಾಖಲಾದ 2ನೇ ವೇಗದ ಅರ್ಧಶತಕ ಇದಾಗಿದೆ. 2ನೇ ಇನ್ನಿಂಗ್ಸ್'ನಲ್ಲಿ ಪೃಥ್ವಿ ಕೇವಲ 26 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು. 1992ರಲ್ಲಿನ ರಣಜಿಯಲ್ಲಿ ಬರೋಡಾ ವಿರುದ್ಧ ವಿನೋದ್ ಕಾಂಬ್ಳಿ 20 ಎಸೆತಗಳಲ್ಲಿ ೫೦ ರನ್‌ಗಳಿಸಿದ್ದರು.