ಕೇವಲ 43 ಎಸೆತಗಳನ್ನೆದುರಿಸಿದ ಪಂತ್ 6 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್'ಗಳ ನೆರವಿನಿಂದ 97ರನ್ ಸಿಡಿಸಿ ಮಿಂಚಿದರು.

ಬೆಂಗಳೂರು(ಮೇ.05): ಡೆಲ್ಲಿ ಡೇರ್'ಡೆವಿಲ್ಸ್ ತಂಡದ ಯುವ ಪ್ರತಿಭೆ ರಿಷಭ್ ಪಂತ್, ಗುಜರಾತ್ ಲಯನ್ಸ್ ಎದುರು ಸ್ಮರಣೀಯ ಇನಿಂಗ್ಸ್ ಕಟ್ಟುವ ಮೂಲಕ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ 208ರನ್'ಗಳ ಬೃಹತ್ ಗುರಿ ನೀಡಿತು. ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿಗೆ 19 ವರ್ಷದ ರಿಷಭ್ ಪಂತ್(97) ಭರ್ಜರಿ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 43 ಎಸೆತಗಳನ್ನೆದುರಿಸಿದ ಪಂತ್ 6 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್'ಗಳ ನೆರವಿನಿಂದ 97ರನ್ ಸಿಡಿಸಿ ಮಿಂಚಿದರು. ಅವರ ಸ್ಪೋಟಕ ಬ್ಯಾಟಿಂಗ್ ನಿನ್ನೆ ಮಿಸ್ ಮಾಡಿಕೊಂಡಿದ್ರೆ ಇಲ್ಲಿದೆ ನೋಡಿ... ಎಂಜಾಯ್ ಮಾಡಿ...