ಲಖನೌ(ಸೆ.12): ಭಾರತ ಹಿರಿಯ ಫಾಸ್ಟ್ ಬೌಲರ್​ ಪ್ರವೀಣ್ ಕುಮಾರ್​ ತಮ್ಮ ಎರಡನೇ ಇನ್ನಿಂಗ್ಸ್​ನ್ನು ಆರಂಭಿಸಿದ್ದಾರೆ.

 29 ವರ್ಷದ ಪ್ರವೀಣ್​ ಕುಮಾರ್​​ ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆ ಹಿನ್ನಲೆ ಪ್ರವಿಣ್​ ಕುಮಾರ್ ಅವರಿಗೆ ಟಿಕೆಟ್​ ನೀಡಲಾಗುತ್ತಿದೆ. 

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್​ ಯಾದವ್​, ಮುಂದಿನ ಚುನಾವಣೆಯಲ್ಲಿ ಪ್ರವಿಣ್​ ಕುಮಾರ್​ ಅವರನ್ನು ಕಣಕ್ಕಿಳಿಸಲಿದ್ದಾರೆ. ಪ್ರವೀಣ್​ ಕುಮಾರ್​ ಭಾರತಕ್ಕಾಗಿ 6 ಟೆಸ್ಟ್ ಮತ್ತು 68 ಏಕದಿನ ಪಂದ್ಯವಾಡಿದ್ದಾರೆ.