ರಾಜ್ ಕೋಟ್(ನ.13): ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಪಶ್ಚಿಮ ಬಂಗಾಳದ ಪ್ರಗ್ಯಾನ್ ಓಝಾ ಮತ್ತು ಅಶೋಕ್ ದಿಂಡಾ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ತಮಿಳುನಾಡು ವಿರುದ್ಧ ರಣಜಿ ಲೀಗ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಫುಟ್ಬಾಲ್ ಆಡುವಾಗ ಈ ಘಟನೆ ನಡೆದಿದೆ.

 

ಮಾತಿಗೆ ಮಾತು ಬೆಳೆದು ದಿಂಡಾ, ಓಝಾರ ಕಣ್ಣಿನ ಭಾಗಕ್ಕೆ ಹೊಡೆದಿದ್ದಾರೆ. ಬಳಿಕ ಕೋಪಗೊಂಡ ೋಜಾ, ದಿಂಡಾನನ್ನ ನೂಕಿದ್ದಾನೆ. ಕೆಳಗೆ ಬಿದ್ದ ದಿಂಡಾ ಮತ್ತಷ್ಟು ಕೋಪಗೊಂಡಿದ್ಧಾನೆ. ಪರಿಸ್ಥಿತಿ ಕೈಮೀರುವುದಕ್ಕೂ ಮುನ್ನ ಮಧ್ಯಪ್ರವೇಶಿಸಿದ ನಾಯಕ ಮನೋಜ್ ತಿವಾರಿ ಮತ್ತು ತಂಡದ ಇತರೆ ಅಧಿಕಾರಿಗಳು ಪರಿಸ್ಥಿತಿ ತಿಳಿಗೊಳಿಸಿದ್ಧಾರೆ.