4 ವರ್ಷಗಳ ಅವಧಿಗೆ ಅಧಿಕಾರದಲ್ಲಿರುವ ಅವರು, ಪಾರದರ್ಶಕ ಆಡಳಿತ ನಡೆಸಲಿದ್ದೇನೆ ಎಂದು ಪ್ರಫುಲ್ ಹೇಳಿದ್ದಾರೆ.

ನವದೆಹಲಿ(ಡಿ.22): ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್‌'ಗೆ ಪ್ರಫುಲ್ ಪಟೇಲ್ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4 ವರ್ಷಗಳ ಅವಧಿಗೆ ಅಧಿಕಾರದಲ್ಲಿರುವ ಅವರು, ಪಾರದರ್ಶಕ ಆಡಳಿತ ನಡೆಸಲಿದ್ದೇನೆ ಎಂದು ಪ್ರಫುಲ್ ಹೇಳಿದ್ದಾರೆ.

ಎಐಎಫ್‌'ಎಫ್ ಚುನಾವಣೆ ಸಂಬಂಧ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ಬುಧವಾರ ತೆರವುಗೊಳಿಸಿದ್ದರಿಂದ ಇಂದು ನಡೆದ ವಾರ್ಷಿಕ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ನೇಮಿಸಲಾಯಿತು.

ನಿವೃತ್ತ ನ್ಯಾಯಮೂರ್ತಿ ಬಿಪಿನ್ ಚಂದ್ರ ಖಂಡಾಪಾಲ್ ಅವರನ್ನು ಕಾರ್ಯಕಾರಿ ಸಮಿತಿಯಲ್ಲಿ ನೇಮಿಸಲಾಗಿದ್ದು 2017ರಿಂದ 2020ರವರೆಗೆ ಖಂಡಾಪಾಲ್ ಅವರು ಅಧಿಕಾರದಲ್ಲಿರಲಿದ್ದಾರೆ. ಮಾಜಿ ಕೇಂದ್ರ ಸಚಿವ ಪ್ರಫುಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.