‘‘ವೈದ್ಯರ ಸಲಹೆ ಪಡೆದ ನಂತರವಷ್ಟೇ ನಾನು ಮುಂದಿನ ತೀರ್ಮಾನ ಕೈಗೊಳ್ಳಲು ಸಾಧ್ಯ. ಸದ್ಯಕ್ಕಂತೂ ಆಸೀಸ್ ಪ್ರವಾಸ ಕಷ್ಟಸಾಧ್ಯವೆಂದೇ ಅನಿಸುತ್ತಿದೆೆ’’- ಪಿ.ಆರ್. ಶ್ರೀಜೇಶ್
ಬೆಂಗಳೂರು(ನ.01): ಗಾಯದ ಸಮಸ್ಯೆಗೆ ಸಿಲುಕಿರುವ ಭಾರತ ತಂಡದ ನಾಯಕ ಪಿ.ಆರ್. ಶ್ರೀಜೇಶ್ ನ. 23ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಏಷ್ಯಾ ಚಾಂಪಿಯನ್‌ಶಿಪ್ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ, ಅ. 31ರ ಮಧ್ಯರಾತ್ರಿ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹ ಆಟಗಾರರೊಂದಿಗೆ ಬಂದಿಳಿದ ಶ್ರೀಜೇಶ್, ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.
‘‘ವೈದ್ಯರ ಸಲಹೆ ಪಡೆದ ನಂತರವಷ್ಟೇ ನಾನು ಮುಂದಿನ ತೀರ್ಮಾನ ಕೈಗೊಳ್ಳಲು ಸಾಧ್ಯ. ಸದ್ಯಕ್ಕಂತೂ ಆಸೀಸ್ ಪ್ರವಾಸ ಕಷ್ಟಸಾಧ್ಯವೆಂದೇ ಅನಿಸುತ್ತಿದೆೆ’’ ಎಂದು ತಿಳಿಸಿದರು.
