9 ತಿಂಗಳಿಂದ ಅಂಗಳದಿಂದ ದೂರ ಉಳಿದಿದ್ದ ವುಡ್ಸ್, ಮುಂದಿನ ತಿಂಗಳು ಗಾಲ್ಫ್‌'ಗೆ ಮರಳುವುದಾಗಿ ಬುಧವಾರವಷ್ಟೇ ಘೋಷಿಸಿದ್ದರು.

ಲಂಡನ್(ನ.03): ನವೆಂಬರ್‌'ನಲ್ಲಿ ಮತ್ತೆ ಕಣಕ್ಕೆ ಮರಳುವುದಾಗಿ ವಿಶ್ವದ ಮಾಜಿ ನಂ.1 ಗಾಲ್ಫರ್ ಟೈಗರ್ ವುಡ್ಸ್ ಹೇಳಿಕೆ

ನೀಡಿದ ಬೆನ್ನಲ್ಲೇ, ನೀಲಿ ಚಿತ್ರ ನಟಿ ಮಿಯಾ ಖಲೀಫಾ, ಘನತೆ ಇರುವಾಗಲೇ ವೃತ್ತಿಜೀವನಕ್ಕೆ ವಿದಾಯ ಹೇಳಿ ಎಂದು ವುಡ್ಸ್‌'ಗೆ ಸಲಹೆ ನೀಡಿದ್ದಾರೆ.

9 ತಿಂಗಳಿಂದ ಅಂಗಳದಿಂದ ದೂರ ಉಳಿದಿದ್ದ ವುಡ್ಸ್, ಮುಂದಿನ ತಿಂಗಳು ಗಾಲ್ಫ್‌'ಗೆ ಮರಳುವುದಾಗಿ ಬುಧವಾರವಷ್ಟೇ ಘೋಷಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಿಯಾ, ‘ಟೈಗರ್ ಈಗಾಗಲೇ ನೀವು ಲಯ ಕಳೆದುಕೊಂಡಿರುವಿರಿ. ಹಾಗಾಗಿ ಘನತೆ ಇದ್ದಾಗಲೇ ಆಟಕ್ಕೆ ವಿದಾಯ ಹೇಳಿ. ಟ್ರಂಪ್‌'ರಂತೆ ಹವ್ಯಾಸಕ್ಕಾಗಿ ಗಾಲ್ಫ್ ಆಡಿಕೊಂಡಿರಿ’ ಎಂದಿದ್ದಾರೆ