ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಧವನ್ 92 ಎಸೆತಗಳಿಂದ 8 ಬೌಂಡರಿ, 2 ಸಿಕ್ಸ್'ರ್'ಗಳಿಂದ 87 ರನ್ ಗಳಿಸಿ ಕೇವಲ 13 ರನ್‌ಗಳಿಂದ ಶತಕ ವಂಚಿತರಾದರು. ಜೊತೆಗಾರ ರಹಾನೆ ಕೂಡ 78 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 62 ರನ್ ಚಚ್ಚಿದರು.
ಪೋರ್ಟ್ ಆಫ್ ಸ್ಪೇನ್(ಜೂ.24): ಇಲ್ಲಿನ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ವಿಂಡೀಸ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 39.2 ಓವರ್'ಗಳಲ್ಲಿ 199/3 ರನ್ ಗಳಿಸಿದಾಗ ವರುಣ ಪಂದ್ಯಕ್ಕೆ ಅಡ್ಡಿಯಾದ. ಮಳೆ ನಿರಂತರವಾಗಿ ಪಂದ್ಯ ಇನ್ನು ಆರಂಭವಾಗಿರಲಿಲ್ಲ.
ಧವನ್,ರಹಾನೆ ಮಿಂಚು
ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಉತ್ತಮವಾಗಿಯೇ ಬ್ಯಾಟ್ ಬೀಸಿದರು. ಧವನ್ 92 ಎಸೆತಗಳಿಂದ 8 ಬೌಂಡರಿ, 2 ಸಿಕ್ಸ್'ರ್'ಗಳಿಂದ 87 ರನ್ ಗಳಿಸಿ ಕೇವಲ 13 ರನ್ಗಳಿಂದ ಶತಕ ವಂಚಿತರಾದರು. ಜೊತೆಗಾರ ರಹಾನೆ ಕೂಡ 78 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 62 ರನ್ ಚಚ್ಚಿದರು.
ನಾಲ್ಕನೆ ಕ್ರಮಾಂಕದಲ್ಲಿ ಆಟ ಆರಂಭಿಸಿದ ಯುವರಾಜ್ ಸಿಂಗ್ ಕೇವಕ 4 ರನ್'ಗಳಿಗೆ ಹೋಲ್ಡರ್'ಗೆ ವಿಕೇಟ್ ಒಪ್ಪಿಸಿದರು. ಮಳೆ ಆರಂಭಕ್ಕೂ ಮುನ್ನ ನಾಯಕ ಕೊಹ್ಲಿ 47 ಎಸತಗಳಿಂದಿಗೆ 32 ಹಾಗೂ ಧೋನಿ 9 ಎಸತಗಳೊಂದಿಗೆ 9 ರನ್'ಗಳಿಸಿ ಆಡುತ್ತಿದ್ದರು
ಸ್ಕೋರ್
ಭಾರತ: 39.2 ಓವರ್'ಗಳಲ್ಲಿ 199/3
ರಹಾನೆ:62(78)
ಧವನ್:87(92)
ಕೊಹ್ಲಿ:32(47)
(ವಿವರ ಅಪೂರ್ಣ)
