ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ 57ನೇ ಪಂದ್ಯದಲ್ಲಿ ಅಂಕಪಟ್ಟಿ ನಂ.1 ಸ್ಥಾನದಲ್ಲಿದ್ದ ಜೈಪುರ ತಂಡಕ್ಕೆ ಆಘಾತ ನೀಡುವಲ್ಲಿ ತಮಿಳ್ ತಲೈವಾಸ್ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವದೆಹಲಿ[ಆ.24]: ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ತಮಿಳ್ ತಲೈವಾಸ್ 21-24 ಅಂತರದ ಜಯ ದಾಖಲಿಸಿದೆ. ನಂ.1 ಸ್ಥಾನದಲ್ಲಿದ್ದ ಜೈಪುರ ವಿರುದ್ಧ 12ನೇ ಸ್ಥಾನದಲ್ಲಿದ್ದ ತಮಿಳ್ ತಲೈವಾಸ್’ಗೆ ಶರಣಾಗಿದೆ. ಈ ಗೆಲುವಿನೊಂದಿಗೆ ತಲೈವಾಸ್ ತಂಡ 9ನೇ ಸ್ಥಾನಕ್ಕೇರಿದೆ. 

PKL 7: ಬೆಂಗಳೂರು ಬುಲ್ಸ್‌ಗೆ ಸೋಲಿನ ಶಾಕ್ ಕೊಟ್ಟ ದಬಾಂಗ್ ಡೆಲ್ಲಿ

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಮೊದಲಾರ್ಧದಲ್ಲಿ ಅಂಕಗಳ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಜೈಪುರ ನಿರೀಕ್ಷೆಯಂತೆಯೇ 14-11 ಅಂಕಗಳ ಮುನ್ನಡೆ ಸಾಧಿಸಿತು.

Scroll to load tweet…

ಇನ್ನು ದ್ವಿತಿಯಾರ್ಧದಲ್ಲಿ ಮಿಂಚಿನ ಪ್ರದರ್ಶನ ತೋರಿದ ತಲೈವಾಸ್ ತಂಡ ನಿರಂತರ ಅಂಕ ಗಳಿಸುವ ಮೂಲಕ ಜೈಪುರದ ಮೇಲೆ ಒತ್ತಡ ಹೇರುತ್ತಾ ಸಾಗಿತು. ಕೊನೆಯ ಕ್ಷಣದವರೆಗೂ ಜಯದ ಮಾಲೆ ಯಾರಿಗೆ ಎನ್ನುವುದು ಖಚಿತವಾಗಿರಲಿಲ್ಲ. ಕಡೆಯ ನಿಮಿಷದಲ್ಲಿ ತಲೈವಾಸ್ ಪರ ಡು-ಆರ್-ಡೈ ರೇಡ್’ನಲ್ಲಿ ಫರಾದ್ ಮಿಲ್’ಗರ್ಧನ್ ಅಂಕ ಗಳಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ತಮಿಳ್ ತಲೈವಾಸ್ ಪರ ವಿಶಾಲ್ ಭಾರದ್ವಾಜ್ 8 ಅಂಕ ಪಡೆದರೆ, ರಾದ್ ಮಿಲ್’ಗರ್ಧನ್ 4 ಹಾಗೂ ಸಿದ್ದಾರ್ಥ್ ದೇಸಾಯಿ ಮತ್ತು ಅಬ್ಜೋರ್ ಮಿಘಾನಿ ತಲಾ 3 ಅಂಕ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಅಂಕಿ-ಅಂಶ:
* ಫರ್ಹಾದ್ ಮಿಲ್’ಗರ್ಧನ್ 50ನೇ ಪ್ರೊ ಕಬಡ್ಡಿ ಪಂದ್ಯವನ್ನಾಡಿದರು.
* ಫರ್ಹಾದ್ ಮಿಲ್’ಗರ್ಧನ್ 100 ಅಂಕ ಕಲೆಹಾಕಿದ ಸಾಧನೆ ಮಾಡಿದರು.
* ದೀಪಕ್ ನಿವಾಸ್ ಹೂಡಾ ಪ್ರೊ ಕಬಡ್ಡಿ ಟೂರ್ನಿಯಲ್ಲಿ 1,600 ಅಂಕ ಕಲೆಹಾಕಿದ ಸಾಧನೆ ಮಾಡಿದರು.