ಪ್ರೊ ಕಬಡ್ಡಿ: ಬುಲ್ಸ್-ಗುಜರಾತ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ
ಆರಂಭದಿಂದಲೂ ತಾಳ್ಮೆಯಿಂದ ರೈಡಿಂಗ್ ನಡೆಸಿದ ರೋಹಿತ್, ಕಾಶಿಲಿಂಗ್ ಹಾಗೂ ಪವನ್ ಬುಲ್ಸ್ ಮುನ್ನಡೆಗೆ ಕಾರಣರಾದರು. 17ನೇ ನಿಮಿಷದಲ್ಲಿ ಗುಜರಾತ್‌ನ್ನು ಆಲೌಟ್ ಮಾಡಿ 16-10 ರಿಂದ ಬುಲ್ಸ್ ಮುನ್ನಡೆಯಿತು. ಮೊದಲಾರ್ಧದ ಅಂತ್ಯಕ್ಕೆ 18-12 ರಿಂದ ಬುಲ್ಸ್ ಮೇಲುಗೈ ಸಾಧಿಸಿತು.
ಅಹಮದಾಬಾದ್[ನ.18] ಕೊನೆ ಕ್ಷಣದಲ್ಲಿ ರೋಹಿತ್ ಗುಲಿಯಾ ಗಳಿಸಿದ ಬೋನಸ್ ಅಂಕದ ನೆರವಿನಿಂದ ಗುಜರಾತ್ ಫಾರ್ಚೂನ್‌ಜೈಂಟ್ಸ್, ಪ್ರೊ ಕಬಡ್ಡಿ 6ನೇ ಆವೃತ್ತಿಯ ಅಂತರ ವಲಯ ಚಾಲೆಂಜ್‌ನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ 30-30 ಅಂಕಗಳ ರೋಚಕ ಡ್ರಾ ಸಾಧಿಸಿತು. ಲೀಗ್‌ನಲ್ಲಿ ಇದು 7ನೇ ಟೈ ಆಗಿದೆ.
ಆರಂಭದಿಂದಲೂ ತಾಳ್ಮೆಯಿಂದ ರೈಡಿಂಗ್ ನಡೆಸಿದ ರೋಹಿತ್, ಕಾಶಿಲಿಂಗ್ ಹಾಗೂ ಪವನ್ ಬುಲ್ಸ್ ಮುನ್ನಡೆಗೆ ಕಾರಣರಾದರು. 17ನೇ ನಿಮಿಷದಲ್ಲಿ ಗುಜರಾತ್‌ನ್ನು ಆಲೌಟ್ ಮಾಡಿ 16-10 ರಿಂದ ಬುಲ್ಸ್ ಮುನ್ನಡೆಯಿತು. ಮೊದಲಾರ್ಧದ ಅಂತ್ಯಕ್ಕೆ 18-12 ರಿಂದ ಬುಲ್ಸ್ ಮೇಲುಗೈ ಸಾಧಿಸಿತು.
ದ್ವಿತೀಯಾರ್ಧದಲ್ಲಿ ಗುಜರಾತ್, ಬುಲ್ಸ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಅಂತಿಮ ರೈಡ್‌ಗೆ ತೆರಳಿದ ಗುಜರಾತ್‌ನ ಗುಲಿಯಾ ಬೋನಸ್ ಗೆರೆ ದಾಟುವ ಮೂಲಕ ಒಂದು ಅಂಕ ಗಳಿಸಿದರೂ ಸಹ ಅವರನ್ನು ಟ್ಯಾಕಲ್ ಮಾಡಿದ ಬುಲ್ಸ್ ಸಹ ತನ್ನ ತೆಕ್ಕೆಗೆ ಒಂದು ಅಂಕ ಹಾಕಿಕೊಂಡಿದ್ದರಿಂದ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಟರ್ನಿಂಗ್ ಪಾಯಿಂಟ್: ಕೊನೆ ರೈಡ್‌ನಲ್ಲಿ ಬೋನಸ್ ಅಂಕ ಗಳಿಸುವ ಮೂಲಕ ರೋಹಿತ್ ಗುಲಿಯಾ, ಗುಜರಾತ್ ಸಮಬಲಕ್ಕೆ ಕಾರಣರಾದರು. ಈ ವೇಳೆ ಟ್ಯಾಕಲ್‌ಗೆ ಗುರಿಯಾದರೂ ರಿವ್ಯೆವ್
ಮೂಲಕ ಬೋನಸ್ ಅಂಕ ಪಡೆಯುವಲ್ಲಿ ಗುಜರಾತ್ ಯಶ ಸಾಧಿಸಿದ್ದು, ಗುಜರಾತ್‌ಗೆ ವರವಾಯಿತು.
ಬುಲ್ಸ್ ಕೈತಪ್ಪಿದ ಗೆಲುವು
ಅಂತಿಮ ರೈಡ್‌ನಲ್ಲಿ ಬೋನಸ್ ಇರಲಿಲ್ಲ. ಆದರೆ ಬೋನಸ್ ಕೊಡಲಾಯಿತು. ಗುಜರಾತ್ ಟಚ್ ಪಾಯಿಂಟ್ ಕೇಳಿ ರಿವ್ಯೆವ್ ತೆಗೆದುಕೊಂಡಿತು. ಆದರೆ ರಿವ್ಯೆವ್‌ನಲ್ಲಿ ಬೋನಸ್ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದ್ದರೂ ಬೋನಸ್ ನೀಡಲಾಯಿತು. ಹೀಗಾಗಿ ಪಂದ್ಯ ಟೈ ಆಯಿತು. ರಿವ್ಯೆವ್‌ನಲ್ಲಿ ಟಿವಿ ಅಂಪೈರ್ ಬೋನಸ್ ಇಲ್ಲ ಅಂದಿದ್ದರೆ ಬುಲ್ಸ್ ಜಯಿಸುತ್ತಿತ್ತು.
ವರದಿ: ವಿನಯ್ ಕುಮಾರ್ ಡಿ.ಬಿ, ಕನ್ನಡಪ್ರಭ