ಒಪ್ಪಂದದ ಪ್ರಕಾರ ಭಾರತ 2015ರಿಂದ 2023ರ ಅವಧಿಯೊಳಗೆ ಪಾಕ್ ವಿರುದ್ಧ ಒಟ್ಟು 6 ದ್ವಿಪಕ್ಷೀಯ ಸರಣಿ ಆಡಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಂದ ಭಾರತ ಇದರಿಂದ ಹಿಂದೆ ಸರಿದಿತ್ತು.
ಕರಾಚಿ(ಅ.23): ನಷ್ಟ ಪರಿಹಾರ ಕೋರಿ ಬಿಸಿಸಿಐ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ (ಪಿಸಿಬಿ) ಅದರಿಂದ ಹಿಂದೆ ಸರಿಯಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಒಪ್ಪಂದದ ಪ್ರಕಾರ ಭಾರತ 2015ರಿಂದ 2023ರ ಅವಧಿಯೊಳಗೆ ಪಾಕ್ ವಿರುದ್ಧ ಒಟ್ಟು 6 ದ್ವಿಪಕ್ಷೀಯ ಸರಣಿ ಆಡಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಂದ ಭಾರತ ಇದರಿಂದ ಹಿಂದೆ ಸರಿದಿತ್ತು.
ಈ ಹಿನ್ನೆಲೆಯಲ್ಲಿ ನಷ್ಟ ಪರಿಹಾರ ಕೋರಿ ಬಿಸಿಸಿಐ ವಿರುದ್ಧ ಪ್ರಕರಣ ದಾಖಲಿಸಲು ಪಿಸಿಬಿ ಚಿಂತನೆ ನಡೆಸಿತ್ತು. ಆದರೆ, ಸರ್ಕಾರದ ಅನುಮತಿ ಲಭಿಸದ ಹೊರತು ಸರಣಿಯಲ್ಲಿ ಆಡುವುದು ಅಸಾಧ್ಯ ಎಂಬ ಅಂಶ ಒಪ್ಪಂದಲ್ಲಿ ಇರುವುದರಿಂದ, ಪ್ರಕರಣ ದಾಖಲಿಸಿದರೂ ಯಾವುದೇ ಪ್ರಯೋಜನ ಇಲ್ಲ ಎಂಬುದು ಪಿಸಿಬಿಗೆ ಮನವರಿಕೆಯಾದ ಕಾರಣ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ ಎನ್ನಲಾಗಿದೆ.